ಬೆಂಗಳೂರು: ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದ ನವ ಜೋಡಿ ಇದೀಗ ಭದ್ರತೆ ನೀಡುವಂತೆ ಕೋರಿ ಪೊಲೀಸರ ಮೊರೆ ಹೋದ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ನಗರದ ವರ್ತೂರು ನಿವಾಸಿಗಳಾದ ಮುರುಳಿ ಹಾಗೂ ಕೃತಿಕಾ ಮದುವೆಯಾದ ನವಜೋಡಿ. ಕಳೆದ 5 ವರ್ಷಗಳಿಂದ ಪ್ರಿತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿ ಹಾಗೂ ಮದುವೆಯಾಗುವ ವಿಷಯವನ್ನು ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಇಬ್ಬರ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಹೀಗಾಗಿ ಮಾರ್ಚ್ 29ರಂದು ಚಿಕ್ಕತಿರುಪತಿಯಲ್ಲಿ ಮದುವೆಮಾಡಿಕೊಂಡಿದ್ದ ಈ ಜೋಡಿ ನಂತರ ವರ್ತೂರಿನಲ್ಲಿ ಆರತಕ್ಷತೆ ಕೂಡ ಮಾಡಿಕೊಂಡಿದ್ದರು.
ಘಟನೆ ವಿವರ:
ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ ಮುರುಳಿ ಮತ್ತು ಕೃತಿಕಾ ಅವರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದು ಮನೆಯಲ್ಲಿ ಈ ಬಗ್ಗೆ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯ ತಂದೆ ತಾಯಿ. ಆದರೂ ಈ ವಿರೋಧದ ನಡುವೆಯೂ ಈ ಇಬ್ಬರು ದೇವಸ್ಥಾನದಲ್ಲಿ ಹೋಗಿ ಮದುವೆ ಮಾಡಿಕೊಂಡಿದ್ದರು. ನಂತರ ಮುರುಳಿ ಮನೆಯಲ್ಲಿಯೇ ವಾಸವಿದ್ದ ಕೃತಿಕಾ , ಹೂವಿನ ವ್ಯಾಪಾರ ಮಾಡಿಕೊಂಡು ಮುರುಳಿ ಜೀವನ ಸಾಗಿಸುತ್ತಿದ್ದ.
ಈ ಮಧ್ಯೆ ಮದುವೆ ಯಾದಮೇಲೂ ಕೊಲೆ ಬೆದರಿಕೆ ಬರುತ್ತಿದ್ದರು ಇದೆಲ್ಲಾ ಸಣ್ಣಪುಟ್ಟ ಇರುವುದು ಎಂದು ಸುಮ್ಮನಾಗಿದ್ದ ಮುರುಳಿ ಮತ್ತು ಕೃತಿಕಾ ಆದರೂ ಕಾಟ ಸಹಿಸಿಕೊಳ್ಳದೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ನವಜೋಡಿ ತಂಟೆಗೆ ಹೋಗದಂತೆ ಹುಡುಗಿ ಕುಟುಂಬಸ್ಥರಿಗೆ ವಾರ್ನ್ ಮಾಡಿ ಕಳುಹಿಸಿದ್ದರು.
ಆದರೂ ಮದುವೆ ಮಾಡಿಕೊಂಡಿದ್ದನ್ನು ಸಹಿಸದ ಹುಡುಗಿಯ ಸೋದರ ಮಾವ ಜುಲೈ 11 ರಂದು ರಾತ್ರಿ 9.30 ಕ್ಕೆ ಮುರುಳಿ ಕೆಲಸಕ್ಕೆ ಹೋಗಿ ವಾಪಸ್ ಬರುವುದನ್ನು ನೋಡಿ ಅವನ ಮೇಲೆ ಹುಡುಗಿ ಸೋದರ ಮಾವ ನಾಗರಾಜು, ಸಂಬಂಧಿ ಮಂಜುನಾಥ್ ಸೇರಿ ಲಾಂಗ್ ನಿಂದ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದಾರೆ ಆದರೆ ಈ ವೇಳೆ ಲಾಂಗ್ ಬೀಸುತ್ತಿದ್ದಂತೆ ಕೈ ಅಡ್ಡ ಕೊಟ್ಟ ಮುರುಳಿ ತನ್ನ ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಓಡಿಹೋಗಿದ್ದಾನೆ.
ಈ ಘಟನೆ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಮುರುಳಿ ಪತ್ನಿ ಕೃತಿಕ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ಹಾಕಿ ಆರೋಪಿ ಮಂಜುನಾಥ್ ನನ್ನು ಬಂಧಿಸಿರುವ ವರ್ತೂರು ಪೊಲೀಸರು ಪ್ರಮುಖ ಆರೋಪಿ ಸೋದರಮಾವ ನಾಗರಾಜ್ ಪತ್ತೆಗೆ ಬಲೆ ಬೀಸಿದ್ದಾರೆ