ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಮಾನ ನಿಲ್ದಾಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅಧಿವೇಶನದಲ್ಲಿ ಬಿಜೆಪಿ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ಜೊತೆಗೆ ಜನ ಅದರಲ್ಲೂ ವಿಶೇಷವಾಗಿ ಬಡಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತರ ಪಡೆಯುವುದಾಗಿ ಹೇಳಿದರು.
ಪಂಚ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಗಳ ಬಗ್ಗೆ ಮಾತಾಡಿದ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೊಳ್ಳು ಗ್ಯಾರಂಟಿಗಳನ್ನು ನೀಡಿ ಗೆದ್ದ ಹಾಗೆಯೇ ಅದರ ನೇತೃತ್ವ ಇಂಡಿಯ ಮೈತ್ರಿಕೂಟ ದೇಶದ ಬೇರೆ ಭಾಗಗಳಲ್ಲೂ ಗ್ಯಾರಂಟಿಗಳ ಮಂತ್ರ ಪಠಿಸಿತು. ಆದರೆ, ಜನ ಅವಟ ಟೊಳ್ಳು ಗ್ಯಾರಂಟಿಗಳನ್ನು ನಂಬಲು ತಯಾರಿಲ್ಲ, ಅವರಿಗೆ ಬೇಕಿರುವುದು ದೇಶದ ರಕ್ಷಣೆ ಮತ್ತು ಅಭಿವೃದ್ಧಿಯ ಗ್ಯಾರಂಟಿ ಮತ್ತು ಅದನ್ನು ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ನೀಡಬಲ್ಲರು ಎಂದು ವಿಜಯೇಂದ್ರ ಹೇಳಿದರು.