ಗೃಹಜ್ಯೋತಿ ಯೋಜನೆ ಕುರಿತಾಗಿ ರಾಜ್ಯದ ಜನರಲ್ಲಿ ಹಲವು ಗೊಂದಲ ಮತ್ತು ಪ್ರಶ್ನೆಗಳು ಮೂಡಿವೆ ಈ ಕುರಿತು ಇಂಧನ ಸಚಿವ ಕೆಜೆ ಜಾರ್ಜ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ಬಾಡಿಗೆದಾರರೂ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ನಾವು ಆರ್ಆರ್ ಸಂಖ್ಯೆ ಆಧಾರದ ಮೇಲೆ ಯುನಿಟ್ ಪರಿಗಣಿಸುತ್ತೇವೆ ಎಂದು ಹೇಳಿದರು. ಬಾಡಿಗೆದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಬರುವುದಿಲ್ಲ. ಮಾಲೀಕರಿರಲಿ, ಬಾಡಿಗೆದಾರಿರಲಿ ಆರ್ ಆರ್ ಸಂಖ್ಯೆ ಆಧಾರದ ಮೀಟರ್ ರೀಡ್ ಮಾಡಲಾಗುತ್ತದೆ. ಅಲ್ಲಿ 200 ಯುನಿಟ್ ಒಳಗಡೆ ಬಳಸಿದ್ದರೇ ಉಚಿತ ನೀಡುತ್ತೇವೆ ಎಂದರು. ಅಲ್ಲದೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಹೆಚ್ಚುವರಿ ಬಿಲ್ ಮಾತ್ರ ಕಟ್ಟಬೇಕು. ಅಂದರೆ ವಾರ್ಷಿಕ ಸರಾಸರಿ 10% ಗಿಂತ ಹೆಚ್ವು ಬಳಸಿದರೆ ಮಾತ್ರ ಬಿಲ್ ಕಟ್ಟಬೇಕು. ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ 10 ರಷ್ಟನ್ನು ಒದಗಿಸಲಾಗುತ್ತದೆ. ಇದರೊಂದಿಗೆ, ಶೇ 110 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ ಬಿಲ್ ಪಾವತಿಸಬೇಕಿಲ್ಲ. ಇದಕ್ಕಿಂತ ಹೆಚ್ಚಿಗೆ ಬಳಸಿದರೇ ಮಾತ್ರ ಬಿಲ್ ಕಟ್ಟಬೇಕು. ಮತ್ತು ಈ ಯೋಜನೆ ಜುಲೈ 1 ರಿಂದ ಬಳಕೆ ಮಾಡುವ ವಿದ್ಯುತ್ ಉಚಿತವಾಗಿರಲಿದೆ ಎಂದು ಹೇಳಿದ್ದಾರೆ.