ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆ ಏರಿಕೆ ಪ್ರಾರಂಭವಾಗುವ ಸಾಧ್ಯತೆ

ನವದೆಹಲಿ;- ಕೆಂಪು ಸುಂದರಿಯ ಹತ್ತಿರ ಹೋಗಲು ಹೆದರುತ್ತಿರುವವರಿಗೆ ಮುಂದಿನ ತಿಂಗಳಿಂದ ಈರುಳ್ಳಿ ಕೂಡ ಕಣ್ಣೀರು ತರಿಸಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಪ್ರಾರಂಭವಾಗುವ ಸಾಧ್ಯತೆಯಿದೆ.
ಮುಂದಿನ ತಿಂಗಳು ಸರಬರಾಜು ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದ ಪ್ರತಿ ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿಗೆ ಏರುವ ಸಾಧ್ಯತೆಯಿದೆ ಎಂದು ಆಗಸ್ಟ್ 4 ರಂದು ವರದಿಯೊಂದು ತಿಳಿಸಿದೆ.
ಆದರೂ, ಬೆಲೆಗಳು 2020 ರಲ್ಲಿ ಏರಿಕೆಯಾಗಿದ್ದಕ್ಕಿಂತ ಕಡಿಮೆ ಇರಲಿದೆ ಎಂದು ತಿಳಿಸಿದೆ.
“ಸರಬರಾಜು ಮತ್ತು ಬೇಡಿಕೆ ಅಸಮತೋಲನದಿಂದಾಗಿ ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ನಮ್ಮ ಅಂದಾಜಿನ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ಆರಂಭದಿಂದ ಬೆಲೆಗಳು ಗಮನಾರ್ಹ ಏರಿಕೆಯನ್ನು ತೋರಿಸುತ್ತಿವೆ. ಕಡಿಮೆ ಎಂದರೆ ಪ್ರತಿ ಕೆಜಿಗೆ 60 ರಿಂದ 70 ರೂಪಾಯಿಗೆ ತಲುಪುತ್ತದೆ. ಆದರೂ ಲೆಗಳು 2020 ರ ಗರಿಷ್ಠಕ್ಕಿಂತ ಕಡಿಮೆ ಇರುತ್ತದೆ”
ರಾಬಿ ಈರುಳ್ಳಿಯ ಜೀವಿತಾವಧಿಯು 1 ರಿಂದ 2 ತಿಂಗಳುಗಳವರೆಗೆ ಕಡಿಮೆಯಾದ ಕಾರಣ ಮತ್ತು ಈ ವರ್ಷದ ಫೆಬ್ರವರಿ, ಮಾರ್ಚ್ನಲ್ಲಿ ಪ್ಯಾನಿಕ್ ಮಾರಾಟದಿಂದಾಗಿ, ಮುಕ್ತ ಮಾರುಕಟ್ಟೆಯಲ್ಲಿ ರಬಿ ಸ್ಟಾಕ್ಗಳು ಸೆಪ್ಟೆಂಬರ್ನ ಬದಲಿಗೆ 15-20 ದಿನಗಳ ಮುಂಚೆ ಅಂದರೆ ಆಗಸ್ಟ್ ಅಂತ್ಯದ ವೇಳೆಗೆ ಗಮನಾರ್ಹವಾಗಿ ಕುಸಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕ ಸರಬರಾಜು ಮಾಡಲು ಸಾಧ್ಯವಾಗದೇ ಹೆಚ್ಚಿನ ಬೆಲೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದಿದೆ.

Loading

Leave a Reply

Your email address will not be published. Required fields are marked *