ಚಿತ್ರದುರ್ಗ: ಕಿತಾಪತಿ ಮಾಡುವುದರಲ್ಲಿ ಬಿಜೆಪಿ ನಂಬರ್ ಒನ್ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಿತಾಪತಿ ಮಾಡುವುದರಲ್ಲಿ ಬಿಜೆಪಿ ನಂಬರ್ ಒನ್. ಒಳ್ಳೆಯದು ನಡೆದಿದೆ ಎಂದಾಗ ಹೀಗೆ ಮಾಡುವುದು ಬಿಜೆಪಿಗೆ ಹೊಸದಲ್ಲ. ಗಾಂಧಿ ಕುಟುಂಬ ತ್ಯಾಗ, ಬಲಿದಾನ ಮಾಡಿದೆ ರಾಹುಲ್ ಗಾಂಧಿ ಯಾತ್ರೆ ಮೇಲೆ ಕಲ್ಲು ತೂರಾಟದಿಂದ ಅವರ ಕೆಟ್ಟ ಬುದ್ಧಿ ತೋರಿಸಿದ್ದಾರೆ. ಅಧಿಕಾರದಲ್ಲಿ ಇರುವಾಗ ತುಂಬಾ ಜವಾಬ್ದಾರಿ ಇರಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನೂ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಗೆ ನಿಜವಾಗಲೂ ರಾಮನ ಶಾಪ ತಟ್ಟಲಿದೆ. ರಾಮ ನಮ್ಮ ನಿಮ್ಮ ಹೃದಯದಲ್ಲಿದ್ದಾನೆ. ನಮ್ಮ ಹಣೆಬರಹದಲ್ಲಿ ಯಾವಾಗ ಬರೆದಿರುತ್ತದೆ ಆಗ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡುತ್ತೇವೆ. ಅಯೋಧ್ಯೆಗೆ ಹೋಗಿರದ ಬಿಜೆಪಿಯವರು ರಾಮದ್ರೋಹಿಗಳಾ? ದೇಶದ ದೊಡ್ಡ ದೊಡ್ಡ ಮನುಷ್ಯರನ್ನು ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದಾರೆ. ಅಲ್ಲಿನ ಸ್ಥಿತಿ ನೆನೆದು ಕೈಮುಗಿದು ನಮಃ ಶಿವಾಯ ಅಂತಾ ಹೇಳಿದ್ದಾರೆ ಎಂದು ಹೇಳಿದರು.