ಹುಬ್ಬಳ್ಳಿ: ಕಾಂಗ್ರೆಸ್ ಅಜೆಂಡಾ ತಿಳಿಸಿಲ್ಲ ಅಂತಾರೆ, ದೇಶದ ಜನ ಇದನ್ನು ಲೈವ ಆಗಿ ನೋಡುತ್ತಾರೆ. ಇದನ್ನು ಲೈವ್ ಆಗಿ ತೋರಸಿದ್ದೆ ಬಿಜೆಪಿ. ಕಾಂಗ್ರೆಸ್ ಪಾರ್ಟಿ ಘಮಂಡಿಯಾ ಉಳಿಸಲು ಸ್ಟಾಲಿನ್ ಹೇಳಿಕೆ ಖಂಡಿಸಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಮೊದಲು ತಮಿಳುನಾಡಿಗೆ ನೀರು ಬಿಟ್ಟು ಇದೀಗ ಮೇಲ್ಮನವಿ ಸಲ್ಲಿಸಿದ್ದಾರೆ. ಇದು ಕೂಡಾ ಘಟಬಂಧನ ಉಳಿಸುವ ತಂತ್ರವಾಗಿದೆ.
ಆ ಮೂಲಕ ರಾಜ್ಯದ ಹಿತಾಸಕ್ತಿ ಬಲಿ ಕೊಟ್ಡಿದ್ದಾರೆ. ಮೋದಿ ಸೋಲಿಸಲು ಷಡ್ಯಂತ್ರ ಮಾಡಿದ್ದಾರೆ. ಏನೇ ಷಡ್ಯಂತ್ರ ಮಾಡಿ ಮೋದಿ ಮತ್ತೆ ಗೆಲ್ಲುತ್ತಾರೆ. ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ. ಅಜೆಂಡಾ ತಗೆದುಕೊಳ್ಳಲು ಸಮಯ ಇದೆ. ಇದಕ್ಕೆ ಒಂದು ಪ್ರೊಸೆಸ್ ಇದೆ. ಮೋದಿ ಬಂದ ಮಾಡಿದ ಮೇಲೆ ಇದನ್ನು ಮಾಡಿಲ್ಲ. 75 ವರ್ಷದಿಂದಲೂ ಈ ಪ್ರೋಸೆಸ್ ಇದೆ ಎಂದರು.