ಬೆಂಗಳೂರು: ಬೈಕ್ ಕಳ್ಳತನ, ಸರಗಳ್ಳತನ, ಸುಲಿಗೆ, ದರೋಡೆ ಸೇರಿದಂತೆ 28 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಸಂಜಯ್ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಜರ್ ಪಾಷಾ ಬಂಧಿತ ಆರೋಪಿಯಾಗಿದ್ದು, ಕಳೆದ ಜುಲೈನಲ್ಲಿ ಜೈಲಿಗೆ ಹೋಗಿ ಬಂದಿದ್ದ ಅಜರ್ ಪಾಷಾ ಜೈಲಿನಿಂದ ಹೊರಬಂದ ಮೇಲೂ ಕಳ್ಳತನ ಮುಂದುವರಿಸಿದ್ದನು. ಬೈಕ್ ಕಳ್ಳತನ, ಸರಗಳ್ಳತನ, ಸುಲಿಗೆ, ದರೋಡೆ ಸೇರಿದಂತೆ 28 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯು ಈಗ ದ್ವಿಚಕ್ರವಾಹನ ಕಳ್ಳತನ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿಯಿಂದ 6.5 ಲಕ್ಷ ಮೌಲ್ಯದ 5 ದ್ವಿಚಕ್ರವಾಹನಗಳು ವಶಕ್ಕೆ ಪಡೆದಿದ್ದು, ಸಂಜಯ್ ನಗರ ಠಾಣೆಯಲ್ಲಿ ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.