ಇಸ್ರೇಲ್: ಪ್ಯಾಲೆಸ್ಟೈನ್ ತುಂಬಾ ಅಪಾಯಕಾರಿ, ಅದರ ಜತೆಗೆ ಒಪ್ಪಂದ ಮಾಡಿಕೊಂಡರೆ ನಮ್ಮ ನಾಶವನ್ನು ನಾವೇ ಮಾಡಿಕೊಂಡಂತೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕದನ ವಿರಾಮದ ನಡುವೆಯು ಇಸ್ರೇಲ್ ಮತ್ತು ಹಮಾಸ್ ನಡುವೆ ದಿನದಿಂದ ದಿನಕ್ಕೆ ಒಂದೊಂದು ಬೆಳವಣಿಗೆ ನಡೆಯುತ್ತಿದೆ. ಇನ್ನು ಹಮಾಸ್ಗೆ ಬೆಂಬಲ ನೀಡುವ ಪ್ಯಾಲೆಸ್ಟೈನ್ ಜತೆಗೆ ನಾವು ಯಾವುದೇ ರೀತಿ ಮಾತುಕತೆಗಳನ್ನು ನಡೆಸುವುದಿಲ್ಲ, ಹಾಗೂ ಪ್ಯಾಲೆಸ್ಟೈನ್ ಜತೆಗೆ ಪರಿಹಾರತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಹೌದು ಪ್ಯಾಲೆಸ್ಟೈನ್ ತುಂಬಾ ಅಪಾಯಕಾರಿ, ಅದರ ಜತೆಗೆ ಒಪ್ಪಂದ ಮಾಡಿಕೊಂಡರೆ ನಮ್ಮ ನಾಶವನ್ನು ನಾವೇ ಮಾಡಿಕೊಂಡಂತೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಈ ಸಂಘರ್ಷದಲ್ಲಿ ನಾವು ವಿಜಯ ಸಾಧಿಸುವರೆಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇಸ್ರೇಲ್ ಜೋರ್ಡಾನ್ ನದಿಯನ್ನು ರಕ್ಷಣೆ ಮಾಡಬೇಕಿದೆ. ಜೋರ್ಡಾನ್ ನದಿಯ ಪಶ್ಚಿಮ ಭಾಗದ ಸಂಪೂರ್ಣ ಪ್ರದೇಶದ ಮೇಲೆ ಇಸ್ರೇಲ್ ಭದ್ರತಾ ನಿಯಂತ್ರಣವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.