ಬೆಂಗಳೂರು: ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಏಳು ತಿಂಗಳಿಂದ ಹಣ ಬಾಕಿ ಇದೆ. ಇದರಲ್ಲಿ ಸ್ವಲ್ಪ ಹಣ ಬಿಡುಗಡೆಯಾಗಿದೆ. ನೂರು ಕೋಟಿ ಸಾಲಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ. ಯಾವ ಸಚಿವರು ಕಮಿಷನ್ ಕೇಳಿಲ್ಲ. ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ. ಯಾವುದೇ ಗುತ್ತಿಗಾರರು ಬಂದು ನನ್ನ ಬಳಿ ದೂರು ಹೇಳಿಲ್ಲ. ಯಾರೂ ಕೊಟ್ಟಿರಬಹುದು. ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.