ಕುಮಾರಸ್ವಾಮಿ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ: ವೀರಪ್ಪ ಮೊಯ್ಲಿ

 ಚಿಕ್ಕಬಳ್ಳಾಪುರ: ಕುಮಾರಸ್ವಾಮಿಯವರ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕಥೆ ಇತಿಹಾಸ ಹೇಳುತ್ತಾ ಹೋದರೆ ಹಲವು ವರ್ಷಗಳೆ ಬೇಕು. ಅವರ ಸಹವಾಸದಿಂದ ಸುಖವಿಲ್ಲ. ಅವರನ್ನು ನಂಬಿದವರಿಗೆ ದೇವರೇ ಗತಿ. ನನಗೆ ಸಿಎಂ ಆಗಿ, ರಾಜಕೀಯದಲ್ಲಿ 50-55 ವರ್ಷದ ರಾಜಕೀಯ ಅನುಭವವಿದೆ. ನನ್ನ ರಾಜಕೀಯ ಇತಿಹಾಸದಲ್ಲಿ ಈ ಅನುಭವ ಇದೆ ಎಂದಿದ್ದಾರೆ.

ಕುಮಾರಸ್ವಾಮಿಯವರ ತಂದೆಯವರ ಜೊತೆ ನಾನು ಚೆನ್ನಾಗಿ ಇದ್ದ ಕಾಲವೂ ಇದೆ. ಅದೇ ಪ್ರಕಾರ ಕಷ್ಟ ನಷ್ಟ ಅನುಭವಿಸಿದ್ದು ಇದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಮಾರಸ್ವಾಮಿ ಜೊತೆ ಬಹಳ ಜನ ಸ್ನೇಹ ಮಾಡಿದ್ರು, ಯಾರೂ ಉದ್ಧಾರ ಆಗಿಲ್ಲ. ಅವರ ಜೊತೆ ಸ್ನೇಹ ಮಾಡಿದವರು ಗುಂಡಿಗೆ ಬೀಳುತ್ತಾರೆ. ಬಿಜೆಪಿ (BJP) ಉದ್ಧಾರ ಆಗುವುದಾದರೆ ಆಗಲಿ ಎಂದಿದ್ದಾರೆ.

 

Loading

Leave a Reply

Your email address will not be published. Required fields are marked *