ಬೆಂಗಳೂರು: ರಾಜ್ಯಕ್ಕೆ ಕತ್ತಲೆ ಭಾಗ್ಯ ಬರುತ್ತದೆ ಎಂದು ಕಳೆದ ತಿಂಗಳು ಸುದ್ದಿಗೋಷ್ಠಿ ನಡೆಸಿ ಹೇಳಿದ್ದೆ. ಇದೀಗ ನನ್ನ ಭವಿಷ್ಯ ನಿಜವಾಗುತ್ತಿದೆ ಎಂದು ಮಾಜಿ ಇಂಧನ ಸಚಿವ ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರವನ್ನು ಮೂದಲಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೈತರಿಗೆ ಒಂದು ಗಂಟೆಯೂ ವಿದ್ಯುತ್ ಕೊಡದೇ ಅಸಮರ್ಪಕ ನಿರ್ವಹಣೆ ಮಾಡಲಾಗ್ತಿದೆ. ಮುಂದಿನ ಆರು ತಿಂಗಳು ಜನ ಕತ್ತಲೆಯ ಭಾಗ್ಯ ಅನುಭವಿಸಬೇಕಾಗುತ್ತದೆ ಎಂದರು.
ಎಸ್ಕಾಂನಲ್ಲಿ ನೌಕರರ ವೇತನಕ್ಕೂ ಕಷ್ಟ ಆಗಲಿದೆ. ಡಿಸೆಂಬರ್, ಜನವರಿ ಹೊತ್ತಿಗೆ ಎಸ್ಕಾಂಗಳ ನೌಕರರಿಗೆ ವೇತನಕ್ಕೂ ಸಮಸ್ಯೆ ಆಗಲಿದೆ. ವಿದ್ಯುತ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ ಎಂದು ಆರೋಪಿಸಿದರು.
ರೈತನಿಗೆ ವಿದ್ಯುತ್ ಕೊಡಲಾಗದಷ್ಟು ಅಸಮರ್ಪಕವಾಗಿ ಸರ್ಕಾರ ಇಂಧನ ಇಲಾಖೆಯನ್ನು ನಿರ್ವಹಣೆ ಮಾಡಲಾಗ್ತಿದೆ. ಸಂಪೂರ್ಣ ಲೋಡ್ ಶೆಡ್ಡಿಂಗ್ ಮಾಡಲಾಗ್ತಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಮೊದಲೇ ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕತ್ತಲೆಯ ದಿನಗಳು ಬರಲಿವೆ ಎಂದರು.