ನಿರ್ಭಯ ಯೋಜನೆಯ ಅಡಿಯಲ್ಲಿ ನೂತನ ಯೋಜನೆ ಜಾರಿ: ಸಚಿವೆ ಸ್ಮೃತಿ ಇರಾನಿ

ನವದೆಹಲಿ ;- ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಸುರಕ್ಷಿತ ಪ್ರಯಾಣದ ವ್ಯವಸ್ಥೆ ಯನ್ನು ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.
ನವದೆಹಲಿಯಲ್ಲಿ ಮಾತನಾಡಿದ ಅವರು, ನಿರ್ಭಯ ಯೋಜನೆಯ ಅಡಿಯಲ್ಲಿ ನೂತನ ಯೋಜನೆಯನ್ನು ರೂಪಿಸಲಾಗಿದ್ದು, ಅಪ್ರಾಪ್ತ ಸಂತ್ರಸ್ತೆಯರಿಗೆ ನೀಡಲಾಗುವ ಈ ನೆರವನ್ನು ಅವರಿಗೆ ತಲುಪಿಸುವುದಕ್ಕಾಗಿ ರಾಜ್ಯ ಸರಕಾರಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳೊಂದಿಗೆ ಕೈಜೋಡಿಸಿ ಮಿಶನ್ ವಾತ್ಯಲ್ಯದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಕಾನೂನು ನೆರವಿನ ಜೊತೆಗೆ, ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯಾಲಯದ ವಿಚಾರಣೆಗಳಲ್ಲಿ ಭಾಗವಹಿಸುವುದಕ್ಕಾಗಿ ಸುರಕ್ಷಿತ ಪ್ರಯಾನದ ವ್ಯವಸ್ಥೆ ಯನ್ನು ಮಾಡಲಾಗುತ್ತದೆ ಎಂದು ನಿರಾನಿ ಹೇಳಿದ್ದಾರೆ.
ಅತ್ಯಾಚಾರದಿಂದ ದೈಹಿಕ ಮತ್ತು ಭಾವನಾತ್ಮಕವಾಗಿ ಆಘಾತಕೊಳ್ಳಗಾದವರನ್ನ ಗುರುತಿಸಿ ಸಚಿವಾಲಯದಲ್ಲಿ ನಾವು ಅಂತಹ ಅಪ್ರಾಪ್ತ ಸಂತ್ರಸ್ತರಿಗೆ ಹಣಕಾಸಿನ ಬೆಂಬಲವನ್ನು ಹೊರತುಪಡಿಸಿ ವೈದ್ಯಕೀಯ ಮೂಲಸೌಕರ್ಯ ಬೆಂಬಲವನ್ನು ನೀಡಲು ನಿರ್ಧರಿಸಿದ್ದೇವೆ. ನಿರ್ಭಯಾ ನಿಧಿಯ ಆಶ್ರಯದಲ್ಲಿ ಅಗತ್ಯವಿದೆ ಎಂದು ಸಚಿವರು ಹೇಳಿದರು

Loading

Leave a Reply

Your email address will not be published. Required fields are marked *