ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಹೊಸ CD ಲೇಡಿ ಪ್ರತ್ಯಕ್ಷವಾಗಿದ್ದು, ಆರ್. ಆರ್. ನಗರ ಶಾಸಕರಾಗಿರುವ ಮಾಜಿ ಮಂತ್ರಿ ಮುನಿರತ್ನ ವಿರುದ್ಧ ಸ್ಪೋಟಕ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ CD ಲೇಡಿ ಸುದ್ದಿಗೋಷ್ಠಿ ಮಾಡಿಲಿದ್ದಾರೆ. ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಮನೆಯಲ್ಲಿ ಸುದ್ದಿಗೋಷ್ಠಿ ಮಾಡಲಿದ್ದು, IAS ಅಧಿಕಾರಿಯೊಬ್ಬರು ಸೇರಿ ಹಲವು ಅಧಿಕಾರಿಗಳಿಗೆ ಹನಿಟ್ರ್ಯಾಪ್ ನಡೆಸಿದ್ದಾರೆ. ಮುನಿರತ್ನ ಹೇಳಿದಂತೆ CD ಲೇಡಿ ಹನಿಟ್ರ್ಯಾಪ್ ಮಾಡಿರೋ ಮಾಹಿತಿ ನೀಡಲಿದ್ದಾಳೆ.
ಕೆಲ ಅಧಿಕಾರಿಗಳು ಸೇರಿ ನಾಲ್ಕು ಜನಕ್ಕೆ ಹನಿಟ್ರ್ಯಾಪ್ ಮಾಡಿದ್ದು ನಿಜವಾಗಿದ್ದು, ಮುನಿರತ್ನ ಸೂಚನೆಯಂತೆ ಹನಿಟ್ರ್ಯಾಪ್ ಮಾಡಲಾಗಿತ್ತು. ಈ ಬಗ್ಗೆ CD ಲೇಡಿ ಬಹಿರಂಗವಾಗಿ ಸ್ಫೋಟಕ ಮಾಹಿತಿ ನೀಡಿದ್ದಾಳೆ. ಯಾವ-ಯಾವ ಅಧಿಕಾರಿಗೆ ಹನಿಟ್ರ್ಯಾಪ್ ಮಾಡಿದ್ದೆ..? ಯಾವ ಉದ್ದೇಶಕ್ಕೆ ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ರು..? ಈ ಎಲ್ಲಾ ಮಾಹಿತಿಯನ್ನು CD ಲೇಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಲಿದ್ಧಾಳೆ. ಸುದ್ದಿಗೋಷ್ಠಿ ನಂತರ ಸಿಡಿಲೇಡಿ ಸೀದಾ ಪೊಲೀಸರ ಬಳಿ ತೆರಳಲಿದ್ದಾಳೆ. ಹನಿಟ್ರ್ಯಾಪ್ ಸಂಬಂಧ ಸಿಡಿಲೇಡಿ ಪೊಲೀಸರಿಗೆ ಮಾಹಿತಿ ನೀಡಲಿದ್ದಾಳೆ. ಪೊಲೀಸರಿಗೆ ಹನಿಟ್ರ್ಯಾಪ್ನ ಇಂಚಿಂಚೂ ಮಾಹಿತಿ ನೀಡಲಿದ್ದಾಳೆ. ಸಿಡಿ ಲೇಡಿ ಸುದ್ದಿಗೋಷ್ಠಿಯಲ್ಲೂ ಸ್ಫೋಟಕ ಸಾಕ್ಷಿ ರಿವೀಲ್ ಮಾಡಲಿದ್ದಾಳೆ.