ಲಾಸೆನ್ ;- ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಕೊರಳೊಡ್ಡಿದ್ದಾರೆ.
ಸ್ಪರ್ಧೆಯ ಮೊದಲ ಯತ್ನದಲ್ಲಿ ಫೌಲ್ ಮಾಡಿದ ನೀರಜ್, ನಂತರದ ಯತ್ನಗಳಲ್ಲಿ ಕ್ರಮವಾಗಿ 83.52 ಮೀ ಹಾಗೂ 85.04 ಮೀ.
ದೂರಕ್ಕೆ ಜಾವೆಲಿನ್ ಎಸೆದರು. ನಾಲ್ಕನೇ ಬಾರಿ ಮತ್ತೆ ಫೌಲ್ ಮಾಡಿದ ಅವರು 5ನೇ ಯತ್ನದಲ್ಲಿ 87.66 ಮೀ ಎಸೆಯುವುದರೊಂದಿಗೆ ಪದಕ ಖಾತ್ರಿ ಪಡಿಸಿಕೊಂಡರು. ಕೊನೇ ಯತ್ನದಲ್ಲಿ 84.15 ಮೀ. ಜಾವೆಲಿನ್ ಥ್ರೋ ಮಾಡಿದರು.
ಜರ್ಮನಿಯ ಜೂಲಿಯನ್ ವೇಬರ್ (87.03 ಮೀ.) ಹಾಗೂ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೇಚ್ (84.15 ಮೀ.) ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದರು.
ಗಾಯದ ಸಮಸ್ಯೆಯಿಂದ ಒಂದು ತಿಂಗಳು ವಿಶ್ರಾಂತಿ ಪಡೆದಿದ್ದ ನೀರಜ್ ಅವರಿಗೆ ಇದು ಪುನರಾಗಮನದ ಕೂಟ.