ನಾಸಾ ವಿಜ್ಞಾನಿಗಳು ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಯಸಿದ್ದಾರೆ: ಎಸ್.ಸೋಮನಾಥ್

ಚೆನ್ನೈ: ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಅಚ್ಚರಿಯ ವಿಚಾರವನ್ನು ಇಸ್ರೋ (ISRO) ಮುಖ್ಯಸ್ಥ ಎಸ್.ಸೋಮನಾಥ್ (S.Somanath) ತಿಳಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಭಾರತ ಈಗ ಉನ್ನತ ಮಟ್ಟದ ಬಾಹ್ಯಾಕಾಶ ಸಂಶೋಧನಾ ಉಪಕರಣಗಳು ಹಾಗೂ ರಾಕೆಟ್ಗಳನ್ನು ಉತ್ಪಾದಿಸುತ್ತಿದೆ. ಅವುಗಳ ಗುಣಮಟ್ಟ ಹಾಗೂ ಅತೀ ಕಡಿಮೆ ವೆಚ್ಚವನ್ನು ಕೇಳಿ ನಾಸಾ ವಿಜ್ಞಾನಿಗಳು ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಯಸಿದ್ದಾರೆ. ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ವಿಸ್ತರಿಸಿದ್ದಾರೆ ಎಂದಿದ್ದಾರೆ.

ನಾವು ಚಂದ್ರಯಾನ-3 (Chandrayaan3) ರಾಕೆಟ್ ಹಾಗೂ ಉಪಕರಣಗಳನ್ನು ತಯಾರಿಸುತ್ತಿದ್ದಾಗ ಅಮೆರಿಕದ ನಾಸಾದ (NASA) ಐದಾರು ಜನ ವಿಜ್ಞಾನಿಗಳು ಇಸ್ರೋಗೆ ಬಂದಿದ್ದರು. ಅವರಿಗೆ ನಮ್ಮ ಉಪಕರಣಗಳನ್ನು ತೋರಿಸಿ ವಿವರಿಸಿದೆವು. ಅಲ್ಲದೇ ನಾವು ಚಂದ್ರನ ಮೇಲೆ ಹೇಗೆ ಇಳಿಯಲಿದ್ದೇವೆ ಎಂಬುದನ್ನು ವಿವರಿಸಿದ್ದೆವು. ಈ ವೇಳೆ ಖರ್ಚಿನ ಬಗ್ಗೆ ಕೇಳಿದ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದರು.

Loading

Leave a Reply

Your email address will not be published. Required fields are marked *