ಬಳ್ಳಾರಿ: ಉತ್ತರ ಭಾರತದ ಪಪ್ಪು ರಾಹುಲ್, ದ. ಭಾರತದ ಪಪ್ಪು ಉದಯನಿಧಿ ಎಂದು ಬಳ್ಳಾರಿ ನಗರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ, ಉದಯನಿಧಿ ಸ್ಟಾಲಿನ್ ಇಬ್ಬರೂ ಪಪ್ಪುಗಳೇ. ಸನಾತನ ಧರ್ಮದ ಬಗ್ಗೆ ಮಾತನಾಡೋ ಉದಯನಿಧಿಗೇನು ಗೊತ್ತಿಲ್ಲ. ಇಷ್ಟು ದಿನ ಕಾವೇರಿ ನೀರು ಕರ್ನಾಟಕಕ್ಕೆ ಮೊದಲ ಆದ್ಯತೆ ಇತ್ತು. ಸಿಎಂ ಸಿದ್ದರಾಯ್ಯ, ಡಿಸಿಎಂ ಡಿಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ.
ಸ್ಟಾಲಿನ್ ಇಂಡಿಯಾ ಮೈತ್ರಿಕೂಟದಲ್ಲಿ ಇದ್ದಾರೆಂದು ನೀರು ಬಿಟ್ಟಿದ್ದಾರೆ. ಮನಸ್ಸು ಮಾಡಿದ್ರೆ ಕಾವೇರಿ ನೀರು ಬಿಡದೇ ಮುಂದೂಡಬಹುದಿತ್ತು. ಆದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದೂಡುವ ಕೆಲಸ ಮಾಡಿಲ್ಲ. 2024ರಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗ್ತಾರೆ. ನಮ್ಮ ದೇಶಕ್ಕೆ ಇಂಡಿಯಾ ಎಂದು ಬ್ರಿಟಿಷರು ಇಟ್ಟಿರುವ ಹೆಸರು. ಮಹಾಭಾರತ ಕಾಲದಿಂದಲೂ ನಮ್ಮ ದೇಶಕ್ಕೆ ಭಾರತ ಅಂತಾ ಇದೆ ಎಂದರು.