ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ಧಾರವಾಹಿಯ ಸಹನಟಿ ಸಹನಾ ಶೆಟ್ಟಿ

ಕಿರುತೆರೆಯ ಖ್ಯಾತ ಧಾರಾವಾಹಿ ‘ನನ್ನರಸಿ ರಾಧೆ’ ಖ್ಯಾತಿಯ ನಟಿ ಸಹನಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹನಾ ಮದುವೆಯಲ್ಲಿ ನನ್ನರಸಿ ರಾಧೆ ಧಾರವಾಹಿ ತಂಡ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

‘ನನ್ನರಸಿ ರಾಧೆ’ ಧಾರವಾಹಿಯಲ್ಲಿ ನಟ ಅಗಸ್ತ್ಯ ರಾಥೋಡ್ ಸಹೋದರಿಯಾಗಿ ಊರ್ವಿ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಘಳಿಸಿದ್ದರು. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಹನಾ ಗುರುಹಿರಿಯರು ನಿಶ್ಚಿಯಿಸಿದ ಪ್ರತಾಪ್ ಎಂಬುವವರ ಕೈ ಹಿಡಿದಿದ್ದಾರೆ.

ಸಹನಾ ಶೆಟ್ಟಿ ಮದುವೆಗೆ, ‘ಗೀತಾ’ ಸೀರಿಯಲ್ ಜೋಡಿ ಭವ್ಯಾ ಗೌಡ- ಧನುಷ್ ಗೌಡ, ನಟಿ ಅಮೂಲ್ಯ, ಬಿಗ್ ಬಾಸ್ ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.

Loading

Leave a Reply

Your email address will not be published. Required fields are marked *