World Cup Cricket: ಪಂದ್ಯದ ವೇಳೆಯೇ ಮೈದಾನದಲ್ಲಿ ನಮಾಜ್: ಪಾಕಿಸ್ತಾನ ಸ್ಟಾರ್ ಬ್ಯಾಟರ್ ವಿರುದ್ಧ ದೂರು

ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದ ವೇಳೆಯೇ ಮೈದಾನದಲ್ಲಿ ನಮಾಜ್ (Namaz) ಮಾಡಿದ್ದ ಪಾಕಿಸ್ತಾನ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammad Rizwan) ವಿರುದ್ಧ ಐಸಿಸಿಗೆ (ICC) ದೂರು ದಾಖಲಾಗಿದೆ. ಪಾಕಿಸ್ತಾನದ ಕ್ರೀಡಾ ನಿರೂಪಕಿ ವಿರುದ್ಧ ದೂರು ನೀಡಿದ್ದ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ (Vineet Jindal) ಅವರು ರಿಜ್ವಾನ್ ವಿರುದ್ಧ ದೂರು ನೀಡಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲ್ಯಾಂಡ್ (Nederland) ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯವನ್ನು ಆಡಿತ್ತು. ಈ ಪಂದ್ಯದ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡಿದ್ದರು. ಈ ಘಟನೆಯನ್ನು ಪ್ರಸ್ತಾಪ ಮಾಡಿದ ವಿನೀತ್ ಜಿಂದಾಲ್ , ಅನೇಕ ಭಾರತೀಯರ ನಡುವೆ ಕ್ರಿಕೆಟ್ ಮೈದಾನದಲ್ಲಿ ನಮಾಜ್ ಮಾಡಿರುವುದು ಕ್ರೀಡಾ ಧರ್ಮಕ್ಕೆ ವಿರುದ್ಧವಾಗಿದೆ. ಇದು ಉದ್ದೇಶಪೂರ್ವಕವಾಗಿ ನಾನು ಮುಸ್ಲಿಂ ಎಂದು ಸಂದೇಶ ನೀಡುವ ಪ್ರಯತ್ನ. ಇದು ಐಸಿಸಿ ನಿಯಮದ ಉಲ್ಲಂಘನೆ ಎಂದು ದೂರು ನೀಡಿದ್ದಾರೆ.

ರಿಜ್ವಾನ್ ಅವರು ಮೈದಾನದಲ್ಲಿ ನಮಾಜ್ ಮಾಡುವುದು ಹೊಸದೆನಲ್ಲ. ಈ ಹಿಂದೆ ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್ಗಳ ಭರ್ಜರಿ ಜಯಗಳಿಸಿತ್ತು. ಭಾರತದ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ್ದರು. ಮೈದಾನದಲ್ಲಿ ನಮಾಜ್ ಮಾಡಿದ್ದಕ್ಕೆ ಅಂದೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ನಂತರ ಪಾಕ್ ಮಾಜಿ ಆಟಗಾರ ವಾಕರ್ ಯೂನಿಸ್ ನೀಡಿದ ಹೇಳಿಕೆ ಸುಂಟರಗಾಳಿ ಎಬ್ಬಿಸಿತ್ತು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕ್ ಗೆಲ್ಲುವುದರ ಜೊತೆಗೆ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ವಿಶೇಷವಾಗಿತ್ತು ಎಂದು ಹೇಳಿದ್ದರು.

Loading

Leave a Reply

Your email address will not be published. Required fields are marked *