ಬೆಂಗಳೂರು: ಅಂದುಕೊಂಡತೇ ರಾಜ್ಯದಲ್ಲಿ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸೀಟು ಸಿಗದೇ ಹೋಗಿರುವ ಕಾರಣಕ್ಕೆ ನೈತಿಕ ಕಾರಣ ಹೊತ್ತು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಇಂದು ಸಂಜೆ ಇಲ್ಲವೇ ನಾಳೆ ಬೆಳಗ್ಗೆ ಜೆ,ಪಿ ನಡ್ಡಾ ಅವರನ್ನು ಭೇಟಿಯಾಗಲಿರುವ , ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ತಮ್ಮ ರಾಜೀನಾಮೆಯನ್ನು ನೀಡುವ ಸಾಧ್ಯತೆಯುನ್ನು ತಳ್ಳಿ ಹಾಕುವಂತಿಲ್ಲ ಅಂಥ ಬಿಜೆಪಿ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಇದಲ್ಲದೇ ನಳೀನ್ ಕುಮಾರ್ ಕಟೀಲ್ ಸಮರ್ಥವಾಗಿ ರಾಜ್ಯಾಧ್ಯಕ್ಷ ರಾಗಿ ಕೆಲಸ ಮಾಡಿಲ್ಲ, ಪಾರ್ಟಿಯನ್ನು ಚುನಾವಣೆ ವೇಳೆಯಲ್ಲಿ ಬಿಜೆಪಿ ಸಂಘಟನೆಯಲ್ಲಿ ಅವರು ಯಡವಿದ್ದರೆ ಎನ್ನಲಾಗುತ್ತಿದೆ. ಇದಲ್ಲದೇ ಯಾವುದೇ ರಾಜಕೀಯ ಪಾರ್ಟಿಗಳು ಸೋತ ಸಮಯದಲ್ಲಿ ನೈತಿಕ ಹೊಣೆ ಹೊತ್ತು ಆ ಪಾರ್ಟಿಗಳ ಮುಖ್ಯಸ್ಥರು ರಾಜೀನಾಮೆ ನೀಡುವುದು ಹಿಂದಿನಿಂದಲೂ ಕೂಡ ನಡೆದುಕೊಂಡು ಬಂದಿದೆ. ಈ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.