ಬೆಂಗಳೂರು: ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekar) ಮತ್ತೆ ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಸೋಮಶೇಖರ್, ನನ್ನ ರಾಜಕೀಯ ಸಾಧನೆಗಳಿಗೆ ಕಾರಣ ಡಿಕೆಶಿ. ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ, ಇದು ನಿಜ.
ಪ್ರಧಾನ ಮಂತ್ರಿಗಳು ಬಂದಿದ್ದರು. ನಿಮ್ಮ ಕ್ಷೇತ್ರದ ಜನರನ್ನ ಕಳಿಸಿ ಅಂತ ಹೇಳಿದ್ರು. ನಾನು ಸಹ ನನ್ನ ಕ್ಷೇತ್ರದಿಂದ ಬಸ್ ಬಿಟ್ಟು ಜನರನ್ನ ಕಳುಹಿಸಿದೆ. ಆದರೆ ಪಿಎಂ ಕಾರ್ಯಕ್ರಮ ಬನ್ನಿ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ. ಹೀಗಾಗಿ ನಾನು ಹೋಗಲಿಲ್ಲ. ಸಿಎಂ ಡಿಸಿಎಂ ಬಗ್ಗೆ ಒಂದೆರೆಡು ಒಳ್ಳೆ ಮಾತುಗಳನ್ನ ಆಡಿದ್ದಕ್ಕೆ ಹೀಗೆ ಆಗ್ತಿದೆ ಎಂದು ಅಸಮಾಧಾನ ಹೊರಹಾಕಿದರು.