ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಕಳೆದೊಂದು ವಾರದಿಂದ ಇಳಿಕೆ ಹಾಗೂ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತವಾಗಿದೆ ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,365 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್ ಬೆಲೆ 5,853 ರೂಪಾಯಿ ಇದೆ. ಮಾರುಕಟ್ಟೆ ಬೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು, ಚಿನ್ನ ಗುರುವಾರದಿಂದ ಶುಕ್ರವಾರಕ್ಕೆ 25 ರುಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 27 ರುಪಾಯಿ ಕಡಿಮೆಯಾಗಿದೆ. ಇದು ಚಿನ್ನ ಖರೀದಿಸುವವರಿಗೆ ನಿಜವಾಗಿಯೂ ಒಳ್ಳೆ ದಿನ.
ಬೆಂಗಳೂರಲ್ಲಿಚಿನ್ನದದರ
ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,365 ರೂ ಇದ್ದು, 10 ಗ್ರಾಂ ಬೆಲೆ 53,650 ರೂಪಾಯಿ ಇದೆ. ಇನ್ನು 22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 25 ರುಪಾಯಿ ಇಳಿಕೆ ಕಂಡುಬಂದಿದ್ದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರುಪಾಯಿ ಇಳಿಕೆ ಕಂಡುಬಂದಿದೆ.
ಬೆಂಗಳೂರಲ್ಲಿಬೆಳ್ಳಿಯದರ
ಚಿನ್ನದಂತೆಯೇ, ಬೆಳ್ಳಿಯ ದರದಲ್ಲಿಯೂ ಕೊಂಚ ಇಳಿಕೆ ಕಂಡುಬಂದಿದೆ. ಈ ವಾರದ ಆರಂಭದಲ್ಲಿಯೇ ಚಿನ್ನ-ಬೆಳ್ಳಿ ಎರಡರ ದರವೂ ಹಿಂದಿಗಿಂತ ಇಳಿಕೆಯಾಗಿದೆ.ಬೆಂಗಳೂರಲ್ಲಿ ಬೆಳ್ಳಿಯ ದರ ಒಂದು ಗ್ರಾಂಗೆ 72.50 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 725 ರೂಪಾಯಿ ಇದೆ. ಕೆ.ಜಿ ಬೆಳ್ಳಿಯ ದರ 72,500 ರೂಪಾಯಿ ಇದೆ