ಹುಬ್ಬಳ್ಳಿಯಲ್ಲಿ ಗಣಪತಿಯ ಪೂಜೆಯಲ್ಲಿ ಭಾಗಿಯಾದ ಮುಸ್ಲಿಂ ಕುಟುಂಬ

ಹುಬ್ಬಳ್ಳಿ: ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆ ಮುಸ್ಲಿಂ ಕುಟುಂಬವೊಂದು (Muslim Family) ಗಣಪನಿಗೆ ಪೂಜೆ ಸಲ್ಲಿಸಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರದಲ್ಲಿ ಪ್ರತಿಷ್ಠಾಪನೆಯಾಗಿರುವ ಗಣೇಶನಿಗೆ ಮುಸ್ಲಿಂ ಕುಟುಂಬ ಪೂಜೆ ಸಲ್ಲಿಸಿದೆ. ನಗರದ ನಿವಾಸಿ ಅಲಿಸಾಬ್ ಅದಾಪ್ ಹಾಗೂ ಮುಸಲ್ಮಾನ ಬಾಂಧವರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಗಣಪನಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದ ಬಳಿಕ ಮುಸ್ಲಿಂ ಕುಟುಂಬ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದ್ದಾರೆ. ಈ ಮೂಲಕ ಪಂಚಾಕ್ಷರಿ ನಗರದ ಗಣೇಶ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.

Loading

Leave a Reply

Your email address will not be published. Required fields are marked *