ಮೈತೆಯಿ ಸಮುದಾಯದ ವಿದ್ಯಾರ್ಥಿಗಳಿಬ್ಬರ ಹತ್ಯೆ ಪ್ರಕರಣ: ಆರೋಪಿ ಅರೆಸ್ಟ್

ಇಂಫಾಲ್: ಮಣಿಪುರದಲ್ಲಿ (Manipur) ನಡೆದಿದ್ದ ಇಬ್ಬರು ಮೈತೆಯಿ ವಿದ್ಯಾರ್ಥಿಗಳ ಹತ್ಯೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪುಣೆಯಲ್ಲಿ (Pune) ಸಿಬಿಐ (CBI) ಬಂಧಿಸಿದೆ. ಆರೋಪಿಯನ್ನು ನ್ಯಾಯಾಲಯ ಅ.16ರ ವರೆಗೆ ಸಿಬಿಐ (CBI) ಕಸ್ಟಡಿಗೆ ನೀಡಿದೆ. ಬಂಧಿತ ಆರೋಪಿಯನ್ನು ಪೌಲುನ್ ಮಾಂಗ್ (22) ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಆರೋಪಿ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಜಾಮ್ ಲಿಂಥೋಯಿಂಗಮಿ (17) ಮತ್ತು ಫಿಜಾಮ್ ಹೆಮ್ಜಿತ್ (20) ಇಬ್ಬರೂ ಜು.6 ರಂದು ನಾಪತ್ತೆಯಾಗಿದ್ದರು. ಅವರ ಮೃತ ದೇಹಗಳ ಫೋಟೋ ಸೆ.25ರಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿತ್ತು. ಪ್ರಕರಣದಲ್ಲಿ ಇಲ್ಲಿಯವರೆಗೂ ಮಹಿಳೆಯರು ಸೇರಿದಂತೆ ನಾಲ್ವರನ್ನು ಈಗಾಗಲೇ ಸಿಬಿಐ ಬಂಧಿಸಿದೆ.

ಬಂಧಿತ ನಾಲ್ವರೂ ಕುಕಿಗಳನ್ನು ಪಾವೊಮಿನ್ಲುನ್ ಹಾಕಿಪ್, ಎಸ್ ಮಲ್ಸಾನ್ ಹಾಕಿಪ್, ಲಿಂಗ್ನೀಚಾಂಗ್ ಬೈಟ್ ಮತ್ತು ಟಿನ್ನೆಲ್ಹಿಂಗ್ ಹೆಂಥಾಂಗ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಸರ್ಕಾರದ ಕೋರಿಕೆಯ ಮೇರೆಗೆ ಆ.23 ರಂದು ಸಿಬಿಐ ಎರಡು ಪ್ರಕರಣಗಳನ್ನು ದಾಖಲಿಸಿತ್ತು. ಅಪ್ರಾಪ್ತ ಸಂತ್ರಸ್ತೆಯ ಪೋಷಕರ ದೂರಿನ ಮೇರೆಗೆ ರಾಜ್ಯ ಪೊಲೀಸರು ಈ ಹಿಂದೆ ದಾಖಲಿಸಿದ್ದ ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.

Loading

Leave a Reply

Your email address will not be published. Required fields are marked *