ಮುಟ್ಟಿದರೆ ಮುನಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಯೋಜನಗಳು ಇವೆ

ಮುಟ್ಟಿದರೆ ಮುನಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ಬಾವ್ಯವೂ ಮುಟ್ಟಿದರೆ ಮುನಿಯೊಂದಿಗೆ ಬಹುಪಾಲು ನಂಟನ್ನು ಹೊಂದಿದೆ. ಚಿಕ್ಕ ಮಕ್ಕಳಂತೂ ಈ ಸಸಿಯನ್ನು ಕಂಡರೆ ಯಾವಾಗ ಮುಟ್ಟಿ ತೀರಬೇಕೊ ಎಂದು ಕಾಯುತ್ತಾರೆ. ಅದನ್ನು ಮುಟ್ಟಿ ಅದು ನಾಚಿಕೊಂಡಾಗ ಎಂಥವರ ಮುಖದಳ್ಳು ಅರೆಕ್ಷಣ ಖುಷಿ ಮೂಡದೆ ಇರದು.
ಇಂತಹ ಮುಟ್ಟಿದರೆ ಮುನಿಯಲ್ಲಿ ಸಾಕಷ್ಟು ಔಷಧಿಯ ಗುಣಗಳು ಇವೆಯೆಂದರೆ ನಂಬುತ್ತೀರಾ? ಹೌದು, ನೀವು ನಂಬಲೇಬೇಕು. ಮುಟ್ಟಿದರೆ ಮುನಿ ಸಸಿಯೂ ನಮ್ಮ ಪುರಾತನ ಕಾಲದಿಂದಲೂ ಔಷಧಿಯ ಚಟುವಟಿಕೆಗಳಿಗಾಗಿ ಬಳಸಲಾಗುತ್ತದೆ.
ಮುಟ್ಟಿದರೆ ಮುನಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಯೋಜನಗಳು ಇವೆ.
• ಕಫ ಮತ್ತು ಶೀತಕ್ಕೆ ಮದ್ದು: ಇದು ಕಹಿ ಮತ್ತು ಶೀತ ಗುಣಗಳನ್ನು ಹೊಂದಿರುವುದರಿಂದ, ಇದು ಕಫ ಮತ್ತು ಪಿತ್ತರಸವನ್ನು ಗುಣಪಡಿಸಲು ಉಪಯುಕ್ತವಾಗಿದೆ.
• ಮೂಲವ್ಯಾಧಿಗೆ ಮದ್ದು : ಈ ಸಸ್ಯವೂ ಮೂಲವ್ಯಾಧಿಯಂತಹ ರೋಗಗಳ ವಿರುದ್ಧ ಬಹಳ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೇ ಮೂಲವ್ಯಾಧಿಯ ಸಂದರ್ಭದಲ್ಲಿ ಈ ಎಲೆಯ ಪುಡಿಯನ್ನು ಹಾಲಿನೊಂದಿಗೆ ಸೇವಿಸಬೇಕು.
• ಕಿಡ್ನಿ ಕಲ್ಲುಗಳಿಗೆ ರಾಮಬಾಣ: ಕಿಡ್ನಿಯಲ್ಲಿ ಕಲ್ಲು ಮತ್ತು ಮೂತ್ರದ ಸಮಸ್ಯೆಗಳಿದ್ದರೆ ಇದರ ಬೇರನ್ನು ಕುಡಿದರೆ ಪರಿಹಾರ ಪಡೆಯಬಹುದು.
• ಕೆಮ್ಮು ನಿವಾರಣೆಯಲ್ಲಿ ಮುಂದು : ಈ ಮುಟ್ಟಿದರೆ ಮುನಿಯ ಸಸಿಯ ಎಲೆಗಳು ಅಥವಾ ಅದರ ಬೇರುಗಳೊಂದಿಗೆ ಆಟವಾಡುವುದರಿಂದ ಕೂಡ ಕೆಮ್ಮು ನಿವಾರಣೆಯಾಗುತ್ತದೆ ಎಂದು ನಾಟಿ ವೈದ್ಯರ ಅಭಿಪ್ರಾಯ.
• ಗಾಯಕ್ಕೆ ಮದ್ದು ಮುಟ್ಟಿದರೆ ಮುನಿ: ಒಂದು ವೇಳೆ ಗಾಯವಾದರೆ ಈ ಸಸಿಯ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಗಾಯದ ಮೇಲೆ ಲೇಪಿಸಿದರೆ ಅಲ್ಲಿಂದ ರಕ್ತಸ್ರಾವ ಆಗುವುದು ನಿಲ್ಲುತ್ತದೆ.

Loading

Leave a Reply

Your email address will not be published. Required fields are marked *