ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ ಬದಲಾವಣೆ – ರೋಹಿತ್ ಪತ್ನಿ ಕೊಟ್ಟ ಮೊದಲ ಪ್ರತಿಕ್ರಿಯೆ ಏನು!?

ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಮುಂಬೈ ಫ್ರಾಂಚೈಸಿ ಅಚ್ಚರಿಗೆ ದೂಡಿದೆ. ಅಲ್ಲದೆ, ಮುಂಬೈ ತಂಡದ ವಿರುದ್ಧ ಸಿಡಿದೆದ್ದಿರುವ ರೋಹಿತ್​ ಅಭಿಮಾನಿಗಳು ಜರ್ಸಿ ಸುಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಫ್ರಾಂಚೈಸಿಯ ಇನ್​ಸ್ಟಾಗ್ರಾಂ ಖಾತೆಯನ್ನು ಅನ್​ಫಾಲೋ ಮಾಡಿದ್ದಾರೆ.

ನಿನ್ನೆಯಷ್ಟೇ ಸೂರ್ಯಕುಮಾರ್​ ಯಾದವ್​ ಒಡೆದ ಹೃದಯದ ಎಮೋಜಿ ಶೇರ್ ಮಾಡುವ ಮೂಲಕ ತಮ್ಮ ಬೇಸರ ಹೊರಹಾಕಿದ್ದರು. ಇದೀಗ ರೋಹಿತ್​ ಪತ್ನಿ ರಿತಿಕಾ ಸಾಜ್ದೇಹ್​ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಇನ್​ಸ್ಟಾಗ್ರಾಂ ಪೋಸ್ಟ್​ಗೆ ರಿತಿಕಾ ಪ್ರತಿಕ್ರಿಯಿಸಿದ್ದಾರೆ.​

2013 ರಿಂದ 2023ರ ವರೆಗೆ ಒಂದು ದಶಕಗಳವರೆಗೆ ಉತ್ಸಾಹಭರಿತ ಸವಾಲು! ನಿಮ್ಮ ಮೇಲಿನ ಗೌರವ ಹೆಚ್ಚಿದೆ ಎಂದು ಚೆನ್ನೈ ತಂಡ, ರೋಹಿತ್​ ಅವರ ನಾಯಕತ್ವದ ಜರ್ನಿಯ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡು ಗೌರವ ಸೂಚಿಸಿದೆ.

ಈ ಪೋಸ್ಟ್​ಗೆ ರಿತಿಕಾ ಅವರು ಕಾಮೆಂಟ್​ ಬಾಕ್ಸ್​ನಲ್ಲಿ ಹಳದಿ ಬಣ್ಣದ ಹೃದಯದ ಎಮೋಜಿ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಹಳದಿ ಬಣ್ಣಕ್ಕೂ ಚೆನ್ನೈ ತಂಡಕ್ಕೂ ಅವಿನಾಭ ಸಂಬಂಧವಿದೆ. ರೋಹಿತ್​ಗೆ ಗೌರವ ಸೂಚಿಸಿದ್ದಕ್ಕೆ ರಿತಿಕಾ ಈ ರೀತಿಯಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಆದರೆ, ರೋಹಿತ್​ ಅವರನ್ನು​ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದನ್ನು ಮೌಖಿಕವಾಗಿ ಈವರೆಗೂ ರಿತಿಕಾ ಪ್ರತಿಕ್ರಿಯೆ ನೀಡಿಲ್ಲ.

ಅಂದಹಾಗೆ ಇತ್ತೀಚೆಗಷ್ಟೇ ಗುಜರಾತ್​ ಟೈಟಾನ್ಸ್​ ತಂಡದಿಂದ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮುಂಬೈ ತಂಡ ಖರೀದಿ ಮಾಡಿತು. ಹಾರ್ದಿಕ್​ ಅವರನ್ನು ಮುಂಬರುವ ಐಪಿಎಲ್​ 17ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್​ ಪರ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದಿದ್ದ ರೋಹಿತ್​ ಶರ್ಮ ಅವರ ‘ಐಪಿಎಲ್​ ನಾಯಕತ್ವ ಯುಗ’ ಅಂತ್ಯಗೊಂಡಂತಾಗಿದೆ.

Loading

Leave a Reply

Your email address will not be published. Required fields are marked *