ಜಿಲ್ಲೆಯಲ್ಲಿ ಮುಂದುವರಿದ ಗೊಲ್ಲರಹಟ್ಟಿಗಳ ಮೈಲಿಗೆ ಮೌಢ್ಯಾಚರಣೆ

ತುಮಕೂರು:- ಜಿಲ್ಲೆಯಲ್ಲಿ ಗೊಲ್ಲರಹಟ್ಟಿಗಳ ಮೈಲಿಗೆ ಮೌಢ್ಯಾಚರಣೆ ಮುಂದುವರಿದಿದೆ. ಬಾಣಂತಿ- ಮಗು ಮತ್ತು
ಋತುಮತಿಯಾದ ಮಹಿಳೆಯರನ್ನು ಊರ ಹೊರಗಿನ ಗುಡಿಸಲಿನಲ್ಲಿಟ್ಟು ಮೌಢ್ಯಾಚರಣೆ ನಡೆಯುತ್ತಿದೆ. ತುರುವೇಕೆರೆ ತಾಲೂಕಿನ ಮಾಯಸಂದ್ರದ ವರಹಸಂದ್ರ ಗೊಲ್ಲರಹಟ್ಟಿಯಲ್ಲಿ ಘಟನೆ ಜರುಗಿದೆ.

ಬಾಣಂತಿ ಚೈತ್ರಾ ಮತ್ತು ಮಗುವನ್ನು ಈ ರೀತಿ ಊರ ಹೊರ ಇಡಲಾಗಿದೆ. ಹಾಗೂ ಋತುಮತಿಯರಾದ ಶಾರದಮ್ಮ, ಪಾರ್ವತಮ್ಮರನ್ನು ಊರ‌ ಹೊರಗಿಟ್ಟು ಅಮಾನುಷ ಕೃತ್ಯ ಎಸಗಿದ್ದಾರೆ.ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಮಹಿಳೆಯರನ್ನು ತಹಶಿಲ್ದಾರ್ ರೇಣುಕುಮಾರ್ ರಕ್ಷಣೆ ಮಾಡಿದ್ದಾರೆ.

Loading

Leave a Reply

Your email address will not be published. Required fields are marked *