ಮಾಲ್ಡೀವ್ಸ್ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಂಸದರ ಹೊಡೆದಾಟ

ಮಾಲ್ಡೀವ್ಸ್: ಭಾರತ ವಿರೋಧ ನಿಲುವು ತಳೆದಿರುವ ಅಧ್ಯಕ್ಷ ಮುಯಿಝಿ ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಮಾಲ್ಡೀವ್ಸ್ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಇಂದು ಮುಯಿಝಿ ಕ್ಯಾಬಿನೆಟ್ ಸಂಯೋಜನೆ ನಿರ್ಧರಿಸಲು ಸಂಸದರ ಅನುಮೋದನೆ ಮತ ನಿರ್ಧಾರ ಕೋಲಾಹಲ ಸೃಷ್ಟಿಸಿದೆ. ಸಂಸತ್ತಿನಲ್ಲಿ ವಿಪಕ್ಷಗಳ ನಾಯಕರು ಹಾಗೂ ಆಡಳಿತದ ಪಕ್ಷದ ಸಚಿವರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಈ ಮೂಲಕ ಮಾಲ್ಡೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಈ ವಿಡಿಯೋ ವೈರಲ್ ಆಗಿದೆ.

ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಂಸದೀಯ ಸಭೆಯಲ್ಲಿ ನಾಲ್ಕು ಕ್ಯಾಬಿನೆಟ್ ಸದಸ್ಯರಿಗೆ ಅನುಮೋದನೆ ತಡೆಯಲು ವಿಪಕ್ಷಗಳು ಸಜ್ಜಾಗಿತ್ತು. 22 ಸದಸ್ಯರ ಅನುಮೋದನೆ ಪಡೆಯಲು ತಯಾರಿ ನಡೆದಿತ್ತು. ಆದರೆ ಈ ಅನುಮೋದನೆ ಪ್ರಕ್ರಿಯೆ ಸಂಪೂರ್ಣ ಜಟಾಪಟಿಯಲ್ಲಿ ಅಂತ್ಯಗೊಂಡಿದೆ. ಕಾರಣ ಸಂಸದರ ಅನುಮೋದನೆಗಾಗಿ ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಮಹಡಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಇದು ತೀವ್ರ ಜಟಾಪಟಿಗೆ ಕಾರಣವಾಗಿದೆ.

ಆಡಳಿತದ ಪಕ್ಷದ ಸದಸ್ಯರು ಸ್ಪೀಕರ್ ಚೇಂಬರ್‌ಗೆ ಮುಗ್ಗಿ ಅಧಿವೇಶನ ನಡೆಯದಂತೆ ತಡೆದಿದ್ದಾರೆ. ಇತ್ತ ವಿಪಕ್ಷ ಸದಸ್ಯರನ್ನು ಪ್ರವೇಶಿಸದಂತೆ ತಡೆದಿದ್ದಾರೆ. ಇದರಿಂದ ತಳ್ಳಾಟ ಸಂಭವಿಸಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸಂಘರ್ಷ ಮಾಲ್ಡೀವ್ಸ್‌ನಲ್ಲಿ ರಾಜಕೀಯ ಸಂಘರ್ಷ ಸೃಷ್ಟಿಸಿದೆ. ಭಾರತ ವಿರೋಧಿ ನಡೆಯಿಂದ ಭಾರಿ ಟೀಕೆಗೆ ಒಳಗಾಗಿದ್ದ ಮಾಲ್ಡೀವ್ಸ್ ಸರ್ಕಾರ ಪ್ರಧಾನಿ ಮೋದಿ ಹಾಗೂ ಭಾರತೀಯರ ವಿರುದ್ಧ ಮಾಡಿದ ಟ್ವೀಟ್‌ನಿಂದ ನಾಲ್ವರು ಮಾಲ್ಡೀವ್ಸ್ ಸಚಿವರು ಅಮಾನತ್ತಾಗಿದ್ದರು. ಇದೀಗ ಈ ನಾಲ್ವರು ಸಚಿವರನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರಿಸಲು ಸಂಸರದ ಅನುಮೋದನೆ ಪಡೆಯಲು ಮುಯಿಝಿ ಸರ್ಕಾರ ಭಾರಿ ಪ್ಲಾನ್ ಮಾಡಿತ್ತು. ಆದರೆ ಈ ಪ್ಲಾನ್ ಜಟಾಪಟಿಯಲ್ಲೇ ಮುಳುಗಿ ಹೋಗಿದೆ.

Loading

Leave a Reply

Your email address will not be published. Required fields are marked *