ಸಂಸದ ತೇಜಸ್ವಿ ಸೂರ್ಯ ಭೇಟಿಯಾದ ತೇಜ ಸಜ್ಜಾ.. ಸೂಪರ್ ಹೀರೋ ಕಾನ್ಸೆಪ್ಟ್ ಸಿನಿಮಾಗೆ ಶಿವಣ್ಣ ಫಿದಾ

ಸೂಪರ್ ಹೀರೋ ಕಾನ್ಸೆಪ್ಟ್‌ ಹೊಂದಿರುವ ಹನು-ಮಾನ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕ ಜೈಕಾರ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವ ಹನು-ಮಾನ್ ಚಿತ್ರವನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಿನ್ನೆ ವೀಕ್ಷಿಸಿದ್ದಾರೆ.

ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಪತ್ನಿ,‌ಮಗಳೊಟ್ಟಿಗೆ ಹನು-ಮಾನ್ ಸಿನಿಮಾ ನೋಡಿದ ಶಿವಣ್ಣನಿಗೆ ತೇಜ್ ಸಜ್ಜಾ ಹಾಗೂ ಅಮೃತಾ ಸಾಥ್ ಕೊಟ್ಟರು. ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಹನುಮಾನ್ ಸಿನಿಮಾವನ್ನು ಮೈಂಡ್ ಬ್ಲೋಯಿಂಗ್ ಚಿತ್ರ ಎಂದರು. ತೇಜ ಸಜ್ಜಾ, ಅಮೃತಾ, ವರಲಕ್ಷ್ಮೀ ಅಭಿನಯವನ್ನು ಕೊಂಡಾಡಿದರು.

ತೇಜ ಮೀಟ್ಸ್ ತೇಜಸ್ವಿ ಸೂರ್ಯ

ಕಟ್ಟರ್ ಹಿಂದೂ ವಾದಿ ಎನಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ತೇಜ ಸಜ್ಜಾ ನಿನ್ನೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಇದೊಂದು ಆತ್ಮೀಯ ಭೇಟಿಯಾಗಿದ್ದು, ಹನುಮಾನ್ ಸಿನಿಮಾ ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಸುಗ್ಗಿ ಸಂಭ್ರಮದ ವಿಶೇಷವಾಗಿ ಬಿಡುಗಡೆಯಾದ ಹನು-ಮಾನ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ನೂರು ಕೋಟಿ ಬಾಚಿಕೊಂಡಿರುವ ತೇಜ ಸಜ್ಜಾ ಚಿತ್ರ ಸ್ಟಾರ್ ಹೀರೋ ಚಿತ್ರಗಳಿಗೆ ಟಕ್ಕರ್ ಕೊಟ್ಟು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿಯಾಗಿ ಓಟ ಮುಂದುವರೆಸಿದೆ

Loading

Leave a Reply

Your email address will not be published. Required fields are marked *