ಮಂಡ್ಯ: ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು

ಮಂಡ್ಯ: ಸೊಸೆಯ ಸಾವಿನ ಸುದ್ದಿ ಕೇಳಿ ಅತ್ತೆಯೂ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅನಾರೋಗ್ಯದಿಂದಾಗಿ ಸೊಸೆ ಸುಶೀಲಾ (42) ನಿನ್ನೆ ಸಂಜೆ ಸಾವನ್ನಪ್ಪಿದ್ದರು. ಸೊಸೆಯ ಸಾವಿನ ಸುದ್ದಿ ಕೇಳಿದ ಅತ್ತೆ ಹುಚ್ಚಮ್ಮ (75) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹುಚ್ಚಮ್ಮನಿಗೆ ಐವರು ಗಂಡುಮಕ್ಕಳಿದ್ದು, ಅದರಲ್ಲಿ 2ನೇ ಮಗನ ಪತ್ನಿಯೇ ಸುಶೀಲಾ. ಸುಶೀಲಾಗೆ ಇಬ್ಬರು ಮಕ್ಕಳು ಕೂಡಾ ಇದ್ದರು. ಅತ್ತೆ-ಸೊಸೆಯ ಸಂಬಂಧ ತಾಯಿ ಮಗಳಂತಿತ್ತು ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಇದೀಗ ಅತ್ತೆ-ಸೊಸೆಯ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ

Loading

Leave a Reply

Your email address will not be published. Required fields are marked *