ತುಮಕೂರು: ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮಗಳು ಸಾವನ್ನಪ್ಪಿರುವ ಘಟನೆ ತುಮಕೂರು(Tumakuru) ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ಶಾಂತಲಕ್ಷ್ಮೀ(30), ಪುತ್ರಿ ಚಿನ್ಮಯಿ(5) ಮೃತ ರ್ದುದೈವಿಗಳು. ಮೃತಪಟ್ಟವರು ತುಮಕೂರಿನ ಕುಂಟಮ್ಮದ ತೋಟದವರು ಎಂದು ಗುರುತಿಸಲಾಗಿದೆ. ಇವರು ಭೀಮಸಂದ್ರದಿಂದ ಮದುವೆ ಮುಗಿಸಿ ತುಮಕೂರು ನಗರಕ್ಕೆ ಬರುತ್ತಿದ್ದರು. ಈ ವೇಳೆ ಸಡನ್ ಬ್ರೇಕ್ ಹಾಕಿದ ಕಾರಣ ಕ್ಯಾಂಟರ್ನ ಆ್ಯಕ್ಸಲ್ ಕಟ್ಟಾಗಿ ಹೌಸಿಂಗ್ ಆಟೋಗೆ ಅಪ್ಪಳಿಸಿದೆ. ಇದೀಗ ಆಟೋ ಚಾಲಕ ಗಿರೀಶ್ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.