ಕಲಬುರ್ಗಿ: ನಿನ್ನೆ ರಾತ್ರಿ ಊಟ ಮಾಡಿದ ಬಳಿಕ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರಾಗಿ 50ಕ್ಕು ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಕಲಬುರಗಿಯಲ್ಲಿ ಜರುಗಿದೆ. ಕಲುಷಿತ ಆಹಾರ ಸೇವಸಿಯೇ ಅಸ್ವಸ್ಥಗೊಂಡಿದ್ದಾರೆಂದು ಕಂಡು ಬರುತ್ತದೆ.ಸರ್ಕಾರಿ ಶಾಲೆಗಳಲ್ಲಿ (School) ಬಿಸಿ ಊಟ ತಿಂದು ಅಸ್ವಸ್ಥರಾಗುವ ಹಾಗೂ ಕಳಪೆ ಗುಣಮಟ್ಟದ ಆಹಾರ ಸೇವಿಸಿ ತೊಂದರೆಯಾಗುವ ಎಷ್ಟೋ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೇ ಅದೇ ರೀತಿ ಕಲಬುರಗಿಯಲ್ಲೂ (Kalburgi) ಇಂದು ಕಲುಷಿತ ನೀರು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.