ಕೃಷ್ಣಾ ನದಿ ತೀರದಲ್ಲಿ ಪ್ರತ್ಯಕ್ಷವಾದ 20ಕ್ಕೂ ಹೆಚ್ಚು ಮೊಸಳೆಗಳು

ರಾಯಚೂರುಮಳೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಮೊಸಳೆ (crocodiles) ಗಳ ದಂಡೇ ದಡದತ್ತ ದೌಡಾಯಿಸುತ್ತಿವೆ. ನದಿ ದಡದಲ್ಲಿ ಕೃಷಿ ಮಾಡುವ ರೈತರು, ತೆಪ್ಪದಲ್ಲಿ ಓಡಾಡುವ ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಇದೇ ಭಯದ ಬೆನ್ನಲ್ಲೇ ಈಗ ಊರಲ್ಲಿ 20 ಮೊಸಳೆಗಳ ಹಿಂಡೆ ಬೀಡುಬಿಟ್ಟಿದೆ.

ರಾಜ್ಯದೆಲ್ಲೆಡೆ ಮಳೆ ಅಬ್ಬರಿಸಿ ಬೊಬ್ಬರಿಯುತ್ತಿದೆ. ಇತ್ತ ಇಷ್ಟು ದಿನ ಸೈಲೆಂಟ್ ಆಗಿದ್ದ ಮಳೆರಾಯ ಈಗ ರಾಯಚೂರು ಜಿಲ್ಲೆಯಲ್ಲೂ ಅಬ್ಬರಿಸಲು ಶುರು ಮಾಡಿದ್ದಾನೆ. ಮತ್ತೊಂದು ಕಡೆ ಮಾಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಬಾಗಲಕೋಠೆಯ ಆಲಮಟ್ಟಿ ಜಲಾಶಯಕ್ಕೆ ನೀರು ಹರಿಬಿಡಲಾಗಿತ್ತು. ಇದರ ಬೆನ್ನಲ್ಲೇ ಈಗ ಅಲ್ಲಿಂದ ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ.

ನಿನ್ನೆಯಿಂದ ಈಗ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ಬಿಡಲಾಗಿದ್ದು, ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ವ್ಯಾಪ್ತಿ ಅಲರ್ಟ್ ಮಾಡಲಾಗಿದೆ. ಕೃಷ್ಣಾ ನದಿ ತಿರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಸಿಲು ಸೂಚಿಸಲಾಗಿದೆ. ಮಧ್ಯೆ ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಬಂದು ಕೂತಿವೆ. ವಿಡಿಯೋ ವೈರಲ್ ಆಗಿತ್ತು.

ಈಗ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಲಾಗಿದೆ. ಆತ್ಕೂರು ಬಳಿಯ ಕುರುಕವಕಲಾ ನಡುಗಡ್ಡೆ ಪ್ರದೇಶಕ್ಕೆ ಬ್ರಿಡ್ಜ್ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.

Loading

Leave a Reply

Your email address will not be published. Required fields are marked *