ಬೆಂಗಳೂರು: ರಾಹುಲ್ ಗಾಂಧಿ ಪಾದಯಾತ್ರೆ ತಡೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯರವರು, ಪಾದಯಾತ್ರೆ ಮಟ್ಟ ಹಾಕೋದು ಸ್ವಾತಂತ್ರ್ಯ ಕಸಿದಂತೆ. ದೇಶದ ಸಮಸ್ಯೆಗಳಿಗಾಗಿ ರಾಹುಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅದನ್ನು ತಡೆಯುವ ಕೆಲಸ ಬಿಜೆಪಿ, ಹಲವು ಪುಂಡರು ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಇನ್ನೂ ನಾನು ಪರಮೇಶ್ವರ್ ಜೊತೆ ಮಾತನಾಡಿದ್ದೇನೆ. ನಿಗಮ ಮಂಡಳಿಗಳಿಗೆ ನೇಮಕಾತಿಗೆ ಶಾಸಕರದ್ದು ಎಲ್ಲಾ ಕ್ಲಿಯರ್ ಆಗಿದೆ. ಇನ್ನು ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ಆಗುತ್ತಿದೆ. ನಾವು ಮತ್ತು ಡಿಕೆಶಿ ಚರ್ಚೆ ನಡೆಸಿದ್ದೇವೆ. ಸುರ್ಜೇವಾಲ ಬಳಿ ಲಿಸ್ಟ್ ಇದೆ. ವೇಣುಗೋಪಾಲ್ ಸಹಿ ಆಗಬೇಕಿದೆ ಎಂದು ಸ್ಪಷ್ಟನೆ ನೀಡಿದರು.