ಕೊಡಗು : ಕಿಡಿಗೇಡಿಗಳು ಗುಂಡು ಹಾರಿಸಿ 18 ವರ್ಷದ ಹೆಣ್ಣಾನೆ ಕೊಂದ ಅಮಾನವೀಯ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ.
ಇಂತಹ ಘಟನೆ ನೋಡಿದರೆ ಮಾನವ ಪಾಪ ಕೃತ್ಯಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಮೂಡುತ್ತದೆ.ಕೊಡಗಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಗುಂಡು ಹಾರಿಸಿ 18 ವರ್ಷದ ಹೆಣ್ಣಾನೆಯನ್ನು ಕೊಂದಿದ್ದಾರೆ.
ಕಳೆದ ರಾತ್ರಿ ಘಟನೆ ನಡೆದಿದ್ದು, ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.