ವಿಡಿಯೋ ಕಾನ್ಫರೆನ್ಸ್ ವೇಳೆ ಅನುಚಿತ ವರ್ತನೆ- FIR ದಾಖಲು

ಬೆಂಗಳೂರು:- ನಗರದಲ್ಲಿ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಅಪರಿಚಿತರ ವಿರುದ್ಧ FIR ದಾಖಲಾಗಿದೆ.

ಕಲಾಪದ ಲಿಂಕ್ ಮೂಲಕ ಭಾಗವಹಿಸಿದ ಅಪರಿಚಿತರಿಂದ‌ ಕೃತ್ಯವೆಸಗಲಾಗಿದೆ. ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಕಚೇರಿಯ ಎನ್. ಸುರೇಶ್​ ಎಂಬುವವರಿಂದ ದೂರು ನೀಡಿದ್ದು, ನ್ಯಾಯಾಲಯದ ಕಲಾಪಕ್ಕೆ‌ ಅಡ್ಡಿಪಡಿಸಿದ ಹಿನ್ನೆಲೆ ಐ.ಟಿ. ಕಾಯ್ದೆ ಸೆ. 67, 67(A) ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಅಶ್ಲೀಲ ಚಿತ್ರ ಪ್ರದರ್ಶಿಸಿ ಅನುಚಿತ ವರ್ತನೆ ತೋರಿದ್ದಾರೆ. ಹೈಕೋರ್ಟ್​ನ ಸೈಬರ್ ಭದ್ರತೆಗೆ ಆತಂಕ ಎದುರಾದ ಹಿನ್ನೆಲೆ ತಾತ್ಕಾಲಿಕವಾಗಿ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪ ಅಮಾನತು ಮಾಡಲಾಗಿದೆ.

Loading

Leave a Reply

Your email address will not be published. Required fields are marked *