ಸಚಿವ ಜಮೀರ್ ವಜಾಕ್ಕೆ ಕೇಸರಿ‌ ಕಲಿಗಳಿಂದ ಸದನದಲ್ಲಿ ಕದನ..!

ಬೆಳಗಾವಿ: ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಕೊಟ್ಟ ಹೇಳಿಕೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ.ಸಂವಿಧಾನಕ್ಕೆ ಜಮೀರ್ ಅಗೌರವ ತೋರಿಸಿದ್ದು,ಸಂಪುಟದಿಂದ ವಜಾ ಮಾಡುವಂತೆ,ಇಂದು ಇಡೀ‌ ದಿನ ಸದನದೊಳಗೆ ಬಿಜೆಪಿ- ಜೆಡಿಎಸ್ ಪ್ರತಿಭಟನೆ ನಡೆಸ್ತು‌.ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಬಿಜೆಪಿಗೆ ಜಮೀರ್ ಕೌಂಟರ್ ಕೊಟ್ರು.

ಬೆಳಗಾವಿಯ ಚಳಿಗಾಲದ ಬ್ಯಾಟಲ್ ನ ಮೊದಲ ವಾರ ಬರ ಹಾಗೂ‌ ಸ್ಥಳೀಯ ವಿಚಾರಕ್ಕೆ ಸಿಮೀತವಾಗಿತ್ತು.. ವಿಪಕ್ಷ ನಾಯಕರು ಹಾಗೂ ಕೆಲ ಶಾಸಕರು ಬರದ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ರಯತ್ನ ಮಾಡಿದ್ರು. ಕೊನೆಗೆ ನಾಡಿನ ದೊರೆ ಉತ್ತರ ಕೊಡಬೇಕಿತ್ತು..

ಆದ್ರೆ ಎರಡು ದಿನ ರಜೆ ಇದ್ದಿದ್ದರಿಂದ ಆ ದಿನಗಳ ಮಟ್ಟಿಗೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು.. ಮತ್ತೆ ಇಂದಿನಿಂ‌ದ ಕುಂದಾನಗರಿ‌ ಬ್ಯಾಟಲ್‌ ಆರಂಭವಾಗಿದ್ದು ಆರಂಭ ಮೊದಲ‌ ದಿನ ಪೂರ್ತಿ ಜಮೀರ್ ಕೊಟ್ಟ ಸ್ಪೀಕರ್ ಸ್ಥಾನದ ನಮಸ್ಕಾರ ಹೇಳಿಕೆಗೆ ವಿಪಕ್ಷಗಳು ನಿಗಿನಿಗಿ ಕೆಂಡವಾಗಿ ಇಡೀ ದಿನ ಸದನ ಪ್ರತಿಭಟನೆಯಲ್ಲಿ ಕೊಚ್ಚಿ ಹೋಯಿತು.

Loading

Leave a Reply

Your email address will not be published. Required fields are marked *