Minister Amit Shah: ಶಿವಮೊಗ್ಗ ನಗರದಲ್ಲಿ ಇಂದು ಚುನಾವಣಾ ಚಾಣಕ್ಯನ ಮತಬೇಟೆ

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಇಂದು ಕೇಂದ್ರ ಗ್ರಹ ಸಚಿವ ಅಮಿತ್ ಷಾ (Minister Amit Shah) ಭೇಟಿ ನೀಡಿ ರೋಡ್ ಶೋ ನಡೆಸಲಿದ್ದಾರೆ ರೋಡ್ ಶೋ ಶಿವಪ್ಪ ನಾಯಕ ವೃತ್ತದಿಂದ ಪ್ರಾರಂಭವಾಗಿ ನೆಹರು ರಸ್ತೆ, ಗೋಪಿ ವೃತ್ತ ಸಾಗಿ ಲಕ್ಷ್ಮೀ ಟಾಕೀಸ್ ವೃತ್ತದಲ್ಲಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮೂರರಿಂದ ಸಂಜೆ 7.30 ರವರೆಗೆ ಬಿಹೆಚ್ ರಸ್ತೆಯ ಕರ್ನಾಟಕ ಸಂಘ ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ ಗೋಪಿ ವೃತ್ತ,

ಲಕ್ಷ್ಮಿ ಟಾಕೀಸ್ ವರೆಗೆ ಜೀರೋ ಟ್ರಾಫಿಕ್ ಆಗಿ ಘೋಷಿಸಲಾಗಿದೆ .ಈ ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸ್ ಇಲಾಖೆ ಕೋರಿದೆ.  ರೋಡ್ ಶೋನಲ್ಲಿ ಭಾಗವಿಸುವ ಸಾರ್ವಜನಿಕರಿಗೆ ಫ್ರೀಡಂ ಪಾರ್ಕ್ ಮೈದಾನ, ಎನ್ಇಎಸ್ ಮೈದಾನ ಮತ್ತು ಸೈನ್ಸ್ ಕಾಲೇಜು ಮೈದಾನಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ

 

Loading

Leave a Reply

Your email address will not be published. Required fields are marked *