BS Suresh: ಬಿ.ಎಸ್.ಸುರೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಸಭೆ

ಬೆಂಗಳೂರು: ಕುಡಿಯುವ ನೀರು, ಶೌಚಾಲಯ ಅಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಕೋಲಾರ, ತುಮಕೂರು, ರಾಮನಗರ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಮಾನ್ಯ  ನಗರಾಭಿವೃದ್ಧಿ ಮತ್ತು ನಗರ ಯೋಜನೆಯ ಸಚಿವರಾದ ಬಿ.ಎಸ್.ಸುರೇಶ್ (ಬೈರತಿ) ಸಭೆ ನಡೆಸಿದ್ದರು. ಈ ವೇಳೆ ಎಲ್ಲಾ ಯೋಜನೆಗಳಿಗೆ ಸಂಬಂಧಪ̧ಟ್ಟ

ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಅನುಕೂಲ ನೀಡಬೇಕು ಹಾಗೂ ಕಲುಷಿತ ನೀರಿನಿಂದ ಚಿತ್ರದುರ್ಗದಲ್ಲಿ ಸಂಭವಿಸಿದ ಘಟನೆ ಯಾವ ಜಿಲ್ಲೆಯಲ್ಲೂ ಮರುಕಳಿದಂತೆ ಎಚ್ಚರ ವಹಿಸಬೇಕೆಂದು ಮಾನ್ಯ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ. ದಿನೇಶ್ ಗುಂಡೂರಾವ್, ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್ ಮತ್ತು ಹಜ಼್ ಸಚಿವರಾದ  ಶ್ರೀ ರಹೀಂ ಖಾನ್,   ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Loading

Leave a Reply

Your email address will not be published. Required fields are marked *