ಉಡುಪಿ: ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಪ್ರಪಂಚದ ಹಲವಾರು ದೇಶಗಳ ರಾಕೆಟ್ ಉಡಾವಣೆಗೆ ಇಸ್ರೋ ಸಹಾಯ ಮಾಡಿದೆ. ಇಸ್ರೋಗೆ ಸೌಲಭ್ಯ, ಸೌಕರ್ಯ ಇಲ್ಲ ಅನ್ನುವ ಕಾಲವೊಂದು ಇತ್ತು. ಅಮೆರಿಕದ ನಾಸಾ, ರಷ್ಯಾದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಇವತ್ತು ಭಾರತದ ಇಸ್ರೋವನ್ನು ಪ್ರಪಂಚ ಕೊಂಡಾಡುವ ರೀತಿ ಆಗಿದೆ. ಚಂದ್ರಯಾನ 3 ಚಂದ್ರನ ಅಂಗಳವನ್ನು ಚುಂಬಿಸುತ್ತೆ ಅನ್ನೋದು ಖುಷಿಯ ವಿಚಾರ. ಬೆಳಗ್ಗೆ ಕೃಷ್ಣಮಠಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಭಾರತ 641 ಕೋಟಿ ರೂ ಖರ್ಚು ಮಾಡಿದ್ದು, ವಿಜ್ಞಾನಿಗಳು ಪ್ರಯತ್ನ ಮಾಡಿದ್ದಾರೆ.
ವಿಜ್ಞಾನಿಗಳ ಪ್ರಯತ್ನ ಯಶಸ್ಸು ಕಾಣಲಿ ವಿಜ್ಞಾನಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕಳೆದ ಬಾರಿ ಚಂದ್ರಯಾನ ಉಡಾವಣೆ ವಿಫಲವಾದಾಗ ಇಸ್ರೋ ಅಧ್ಯಕ್ಷರಿಗೆ ಪ್ರಧಾನಿ ಸಮಾಧಾನ ಮಾಡಿದ್ದರು. ಕೆಲವು ಸಂದರ್ಭ ಬೇರೆ ಬೇರೆ ಕಾರಣಗಳಿಗೆ ವಿಫಲ ಆಗಬಹುದು. ಪ್ರಧಾನಿಗಳು ವಿಜ್ಞಾನಿಗಳನ್ನು ಹುರುದುಂಬಿಸಿ ಮತ್ತೆ ಹಣ ನೀಡಿದ್ದರು. ಹೀಗಾಗಿ ಮತ್ತೊಮ್ಮೆ ನಮ್ಮ ವಿಜ್ಞಾನಿಗಳು ಈ ಪ್ರಯತ್ನ ಮಾಡಿದ್ದಾರೆ. ಇಲ್ಲಿಯ ತನಕ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಕೊನೆಯ ಪ್ರಕ್ರಿಯೆವರೆಗೂ ಯಶಸ್ಸು ಕಾಣಲಿ ಅಂತ ಶುಭ ಹಾರೈಸುತ್ತೇನೆ ಎಂದು ಶುಭಕೂರಿದರು.