ಮುಂಬೈ: ಇಲ್ಲಿನ ಗೋರೆಗಾಂವ್ನ (Goregaon) ಬಹುಮಹಡಿ ಕಟ್ಟಡ ಒಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ (Massive Fire) ಅವಘಡದಲ್ಲಿ ಆರು ಜನ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ.
ಬೆಂಕಿಗೆ ಆಹುತಿಯಾದ ಆರು ಜನರಲ್ಲಿ ಓರ್ವ ಪುರುಷ, ಐವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.
ಗಾಯಗೊಂಡ 40 ಜನರಲ್ಲಿ 12 ಪುರುಷರು ಮತ್ತು 28 ಮಹಿಳೆಯರು, ಓರ್ವ ಅಪ್ರಾಪ್ತ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮುಂಬೈನ ಎಚ್ಬಿಟಿ ಮತ್ತು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋರೆಗಾಂವ್ನ ಪಶ್ಚಿಮ ಆಜಾದ್ ನಗರದ ಪ್ರದೇಶದ ಜೈ ಭವಾನಿ ಕಟ್ಟಡದಲ್ಲಿ ಮುಂಜಾನೆ 3ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡಕ್ಕೆ ಕಾರಣ ಏನೆಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ