ಮಂಗಳೂರು: ಮಂಗಳೂರಿನ ಹೆಸರಾಂತ ಮಹೇಶ್ ಬಸ್ ಟ್ರಾವೆಲ್ಸ್ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಪ್ರಕಾಶ್ ಶೇಖ(43) ಮೃತ ರ್ದುದೈವಿ. ಖಾಸಗಿ ಬಸ್, ಟೂರಿಸ್ಟ್, ಲಾರಿ ಉದ್ಯಮದಲ್ಲಿ ಹೆಸರು ಮಾಡಿದ್ದ ಪ್ರಕಾಶ್ ಶೇಖ ಅವರು ನೂರಕ್ಕೂ ಅಧಿಕ ಬಸ್ಗಳನ್ನು ಹೊಂದಿದ್ದರು. ಇನ್ನು ಮಂಗಳೂರು, ಉಡುಪಿಯಲ್ಲಿ ಮಹೇಶ್ ಟ್ರಾವೆಲ್ಸ್ ಭಾರೀ ಪ್ರಸಿದ್ಧಿ ಗಳಿಸಿತ್ತು. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.