ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ಶನಿವಾರ ಅಂದರೆ ಮೇ 6 ರಂದು 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ದೋಷಿ ಎಂದು ತೀರ್ಪು ನೀಡಿದೆ. ಆರೋಪಿಯನ್ನು 2015ರಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಮೇ 20ರಂದು ಆರೋಪಿಯ ಶಿಕ್ಷೆ ಕುರಿತು ನ್ಯಾಯಾಲಯ ತೀರ್ಪು ನೀಡಲಿದೆ.
ಆರೋಪಿಯ ಹೆಸರು ರವೀಂದರ್. ಈತ ಸರಣಿ ಅತ್ಯಾಚಾರಿ ಮತ್ತು ಕೊಲೆಗಾರ. ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತ ಮಾದಕ ವ್ಯಸನಿಯಾಗಿದ್ದ. ರವೀಂದರ್ 7 ವರ್ಷಗಳಲ್ಲಿ 30 ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದಿದ್ದ. ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಯುಪಿ ಪ್ರದೇಶಗಳಲ್ಲಿ ಹೆಚ್ಚಿನ ಅತ್ಯಾಚಾರಗಳನ್ನು ನಡೆಸಿದ್ದಾನೆ.
ಪ್ರತಿದಿನ 40 ಕಿ.ಮೀ ಅಲೆದಾಟ
ಪೊಲೀಸರ ಪ್ರಕಾರ, ರವೀಂದರ್ ಸ್ವತಃ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. 2008ರಲ್ಲಿ ಉತ್ತರ ಪ್ರದೇಶದ ಕಾಸ್‌ಗಂಜ್‌ನಿಂದ ದೆಹಲಿಗೆ ಬಂದಿದ್ದು, ಆ ಸಮಯದಲ್ಲಿ ಅವನಿಗೆ 18 ವರ್ಷ ವಯಸ್ಸಾಗಿತ್ತು. ಈತನ ತಂದೆ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಆಕೆಯ ತಾಯಿ ಜನರ ಮನೆಗಳಲ್ಲಿ ಅಡುಗೆ ಮತ್ತು ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ದೆಹಲಿಗೆ ಬಂದ ನಂತರ ಮದ್ಯಪಾನ, ಡ್ರಗ್ಸ್ ಚಟಕ್ಕೆ ಬಿದ್ದಿದ್ದ ರವೀಂದರ್ ಪೋರ್ನ್ ವಿಡಿಯೋ ನೋಡುವ ಚಟಕ್ಕೆ ಬಿದ್ದಿದ್ದ.
ರವೀಂದರ್ ಪ್ರತಿದಿನ ಸಂಜೆ ಮದ್ಯಪಾನ ಅಥವಾ ಡ್ರಗ್ಸ್ ಸೇವಿಸುತ್ತಿದ್ದ. ನಂತರ ಅಪ್ರಾಪ್ತ ಮಕ್ಕಳನ್ನು ಹುಡುಕಿಕೊಂಡು ಹೋಗುತ್ತಿದ್ದ. ಇದಕ್ಕಾಗಿ ದಿನದಲ್ಲಿ 40 ಕಿ.ಮೀ ನಡೆಯುತ್ತಿದ್ದನು. ಮೊದಲು 2008ರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಂದಿದ್ದ. ಮೊದಲ ಬಾರಿ ಅಪರಾಧಕ್ಕೆ ಸಿಕ್ಕಿಬೀಳದಿದ್ದಾಗ ಅವನ ಧೈರ್ಯ ಹೆಚ್ಚಾಯಿತು. ನಂತರ ಅದೇ ಅವನ ದಿನಚರಿಯಾಯಿತು.
ಮಕ್ಕಳನ್ನು ಹತ್ತಿರ ಕರೆಯಲು ನೋಟಿನ ದುರಾಸೆ ಮತ್ತು ಮಿಠಾಯಿ ಕೊಡುತ್ತಿದ್ದ. ಮಕ್ಕಳ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದ. ನಂತರ ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರವೆಸಗಿ ಕೊಲ್ಲುತ್ತಿದ್ದ. 7 ವರ್ಷಗಳಲ್ಲಿ 6 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.