ಮೈಸೂರು: ಮನೆಯಲ್ಲಿ ಅಕ್ರಮವಾಗಿ ಆನೆ ಹಲ್ಲು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಉದಯಗಿರಿಯ ಮನೆ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದು ಅಭಿರಾಮ ಸುಂದರಂ ಎಂಬಾತನನ್ನು ಬಂಧಿಸಿದ್ದಾರೆ. ಡಿಸಿಎಫ್ ಡಾ. ಬಸವರಾಜ್, ಎಸಿಎಫ್ ಲಕ್ಷ್ಮಿಕಾಂತ್, ಮಾರ್ಗದರ್ಶನದಲ್ಲಿ ಆರ್ ಎಫ್ ಓ ಸುರೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಆನೆ ದಂತ ವಶಕ್ಕೆ ಪಡೆದಿದ್ದಾರೆ. ಆನೆ ಹಲ್ಲು ಆರೋಪಿಗೆ ಎಲ್ಲಿ ದೊರೆಯಿತು, ಯಾವ ಕಾರಣಕ್ಕೆ ಸಂಗ್ರಹಿಸಿಟ್ಟಿದ್ದ ಅನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.