Mallikarjuna Kharge: ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಉದೋ ಉದೋ ಅನ್ನುತ್ತಾರೆ: BJP ವಿರುದ್ಧ ಖರ್ಗೆ ವಾಗ್ದಾಳಿ

ಶಿವಮೊಗ್ಗ: ನಗರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) , ಬಿಜೆಪಿ ಖಜಾನೆ ತುಂಬಿದೆ. ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಉದೋ ಉದೋ ಅನ್ನುತ್ತಾರೆ. ಬಿಜೆಪಿಯಿಂದ ಕರ್ನಾಟಕಕ್ಕೆ ಕೊಡುಗೆ ಏನು? ಕರ್ನಾಟಕಕ್ಕೆ ಏನಾದರೂ ದೊಡ್ಡ ಕಾರ್ಖಾನೆ ಮಾಡಿಕೊಟ್ಟಿದ್ದೀರಾ?

ದೊಡ್ಡ ಹೂಡಿಕೆ ಏನಾದರೂ ಮಾಡಿದ್ದೀರಾ? ಏನು ಮಾಡಿದ್ದರೂ ಕೂಡಾ ಮೈಸೂರು ಮಹಾರಾಜರ ಕಾಲದಲ್ಲಿ, ಜವಹರ್ ಲಾಲ್ ನೆಹರು ಕಾಲದಲ್ಲಿ ಆಗಿರುವುದು ಎಂದರು. ಪ್ರತಿಯೊಬ್ಬರಿಗೆ 10 ಕೆಜಿ ಸಣ್ಣ ಕ್ಕಿ ಕೊಡುತ್ತೇವೆ, 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ, ಉಚಿತ ಬಸ್ ಪಾಸ್ ಕೊಡುತ್ತೇವೆ, ಇದೆಲ್ಲಾ ನಮ್ಮ ಗ್ಯಾರೆಂಟಿ ಯೋಜನೆ. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ ಎಂದರು.

Loading

Leave a Reply

Your email address will not be published. Required fields are marked *