ಬೆಂಗಳೂರು : ತಾನು ತೃತಿಯ ಲಿಂಗಿ ಎಂದು ಹೇಳಿಕೊಂಡು ಅಕ್ರಮವಾಗಿ ಶಡ್ ನಿರ್ಮಾಣ ಮಾಡಿಕೊಂಡಿದ್ದವನಿಗೆ ಸ್ಥಳೀಯರು ಗೂಸಾ ಕೊಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಚೇತನ್ ಎಂಬ ಹೆಸರಿನ ವ್ಯಕ್ತಿ ತಾನು ತೃತಿಯ ಲಿಂಗಿ ಎಂದು ಹೇಳಿಕೊಂಡು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದ.
ಈತನಿಗೆ ಹೆಂಡತಿ ಮಕ್ಕಳಿದ್ದು ತೃತಿಯಲಿಂಗಿ ಎಂದುಕೊಂಡು ಅಕ್ರಮವಾಗಿ ಶಡ್ ನಿರ್ಮಾಣ ಮಾಡಿದ್ದ.
ಅಲ್ಲದೇ ಶಡ್ ನಿರ್ಮಾಣ ಮಾಡಿಕೊಂಡು ದಂದೆ ನಡೆಸುತ್ತಿದ್ದ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ಟಿ.ದಾಸರಹಳ್ಳಿಯ ಮಂಜುನಾಥ್ ನಗರ ನಿವಾಸಿಗಳು ಶಡ್ ತೆರವು ಮಾಡಿ ಆತನಿಗೆ ಗೂಸಾ ಕೊಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲೆ ನಿರ್ಮಾಣ ಮಾಡಿದ್ದ ಶಡ್ ಇದೀಗ ತೆರವು ಮಾಡಲಾಗಿದೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಬೇಟಿ ನೀಡಿ ಪರೀಶಿಲನೆ ಮಾಡಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.