ಕಾಂಗ್ರೆಸ್ ನಿರ್ನಾಮ ಮಾಡಲು ಬಹುಮತ ಇರುವವರು ಒಟ್ಟಾಗಿದ್ದೇವೆ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ದೇಶ ಉಳಿಬೇಕು ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟ್ ಗೆಲ್ಲಬಾರದೆಂದು ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ” ಕಾಂಗ್ರೆಸ್ ಮತ ವಿಭಜನೆಯಾಗಿ ಕಳೆದ ಬಾರಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದುಕೊಂಡಿತ್ತು. ಈ ಸಲ ಆ ಒಂದೂ ಸ್ಥಾನವೂ ಇರುವುದಿಲ್ಲ. ರಾಜ್ಯದಲ್ಲಿ 28ಕ್ಕೆ 28 ಸೀಟ್ ನಾವು ಗೆಲ್ಲುತ್ತೇವೆ ” ಎಂದರು.

ಈ ದೇಶದಲ್ಲಿ ಕಾಂಗ್ರೆಸ್ ಬೇಡ ಎಂದು ಜನ ತೀರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ನಿರ್ನಾಮ ಮಾಡಲು ಬಹುಮತ ಇರುವವರು ಒಟ್ಟಾಗಿದ್ದೇವೆ ಎಂದರು. ಭಾರತೀಯ ಜನತಾ ಪಾರ್ಟಿ ಹಾಗೂ ಜಾತ್ಯಾತೀತ ಜನತಾದಳ ಒಂದಾಗಿವೆ. ಲೋಕಸಭಾ ಚುನಾವಣೆ ಸ್ಥಳೀಯ ಚುನಾವಣೆ ಅಲ್ಲ. ದೇಶವನ್ನು ಉಳಿಸುವ ಚುನಾವಣೆ ಆಗಿದೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ ಎಂದರು.

ಕಾಂಗ್ರೆಸ್ ಮತ ವಿಭಜನೆಯಾಗಿ ಕಳೆದ ಬಾರಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದುಕೊಂಡಿತ್ತು. ಈ ಸಲ ಆ ಒಂದೂ ಸ್ಥಾನವೂ ಇರುವುದಿಲ್ಲ. ರಾಜ್ಯದಲ್ಲಿ 28ಕ್ಕೆ 28 ಸೀಟ್ ನಾವು ಗೆಲ್ಲುತ್ತೇವೆ. ಸಮೀಕ್ಷೆಯಲ್ಲಿ ಐದಾರು ಸ್ಥಾನಗಳನ್ನ ಕಡಿಮೆ ಕೊಡುತ್ತಿದ್ದಾರೆ. ಆ ಸ್ಥಾನಗಳು ಯಾರಿಗೆ ದಕ್ಕುತ್ತವೆ? ಕಾಂಗ್ರೆಸ್ಸಿಗಂತೂ ಅಲ್ಲ! ಚುನಾವಣೆ ದೃಷ್ಟಿಯಿಂದ ನಾವಿಬ್ರೂ ಒಂದಾಗಿದ್ದೇವೆ ಎಂದರು.

Loading

Leave a Reply

Your email address will not be published. Required fields are marked *