ಇಂಡೋನೇಷಿಯಾದ ನಟಿ ಜೊತೆ ಡ್ಯುಯೆಟ್‌ ಹಾಡಲಿರುವ ಮಹೇಶ್‌ ಬಾಬು!

ಟಾಲಿವುಡ್‌ನ ಸ್ಟಾರ್ ನಟ ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ಜೊತೆ ಹೊಸ ಸಿನಿಮಾಗಾಗಿ ಕೈ ಜೋಡಿಸಿರೋದು ಗೊತ್ತಿರುವ ವಿಚಾರ. ಇದೀಗ ಮಹೇಶ್ ಬಾಬು ಜೊತೆ ಡ್ಯುಯೇಟ್ ಹಾಡುವ ನಾಯಕಿ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ (Chelsea Elizabeth Islan) ಅವರನ್ನು ಮಹೇಶ್ ಬಾಬುಗೆ (Mahesh Babu) ನಾಯಕಿಯಾಗಿ ಚಿತ್ರತಂಡ ಫೈನಲ್ ಮಾಡಿದೆ

ಮಹೇಶ್ ಬಾಬು- ರಾಜಮೌಳಿ (Rajamouli) ಕಾಂಬಿನೇಷನ್ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಚಿತ್ರಕ್ಕೆ ಬೇಕಾಗಿರೋ ಪಾತ್ರಧಾರಿಗಳ ಹುಡುಕಾಟ ಕೂಡ ನಡೆಯುತ್ತಿದೆ. ಸದ್ಯ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ನಾಯಕಿಯ ಆಯ್ಕೆ ಮಾಡಲಾಗಿದೆ.

ನಟಿ ಚೆಲ್ಸಿಯಾ ಅವರನ್ನು ಕೆಲದಿನಗಳ ಹಿಂದೆ ಸ್ಕ್ರಿನ್ ಟೆಸ್ಟ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ. ಇಂಡೋನೇಷಿಯಾದ ಮೂಲದ ಈ ನಟಿ ‘ಟೇಂಟಂಗಾ ಮೆಸಾ ಗಿಟು’ ಹೆಸರಿನ ಟಿವಿ ಸರಣಿ ಮೂಲಕ ಜನಪ್ರಿಯತೆ ಗಳಿಸಿದವರು.

ನಟ ಮಹೇಶ್ ಬಾಬುಗೆ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ನಾಯಕಿ ಎಂಬ ಸುದ್ದಿ ಚಿತ್ರತಂಡದಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಸುದ್ದಿ ಕೇಳಿರೋ ಪ್ರಿನ್ಸ್ ಮಾತ್ರ ಸಖತ್ ಖುಷಿಪಟ್ಟಿದ್ದಾರೆ. ವಿಷ್ಯ ಏನೇ ಇರಲಿ ಸಿನಿಮಾ ಬೇಗ ತೆರೆಯ ಮೇಲೆ ನೋಡಬೇಕು ಅಂತ ಅಭಿಮಾನಿಗಳು ಕಾಯ್ತಿದ್ದಾರೆ.

Loading

Leave a Reply

Your email address will not be published. Required fields are marked *