ಪ್ರಿಯಕರನೊಂದಿಗೆ ಸೇರಿ ಗಂಡನಿಗೆ ಮಸಣದ ದಾರಿ ತೋರಿಸಿದ ಮಡದಿ

ಬೆಂಗಳೂರುತಲಘಟ್ಟಪುರದಲ್ಲಿ ಜೂ.28ರಂದು ನಡೆದಿದ್ದ ಅರುಣ್​ ಕುಮಾರ್ ಎನ್ನುವ ವ್ಯಕ್ತಿ ಕೊಲೆ ಪ್ರಕರಣವನ್ನು ಪೊಲೀಸರು 40 ಗಂಟೆಗಳಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರುಣ್​ ಕುಮಾರ್​ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ತಾಳಿ ಕಟ್ಟಿದ ಹೆಂಡತಿನೇ.

ಪತ್ನಿ ರಂಜಿತಾ ಎನ್ನುವಾಕೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿ ಅರುಣ್​ ಕುಮಾರ್​ನನ್ನು ಕೊಲೆ ಮಾಡಿದ್ದಾಳೆ. ಈ ಸಂಬಂಧ ಇದೀಗ ತಲಘಟ್ಟಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ರಂಜಿತಾ, ಪ್ರಿಯಕರ ಗಣೇಶ್, ಶರತ್ ಶಿವಾನಂದ, ದೀಪು ಬಂಧಿತ ಆರೋಪಿಗಳು.

ಆರೋಪಿ ಗಣೇಶ್​, ರಂಜಿತಾ ನಡುವೆ ಅಕ್ರಮ ಸಂಬಂಧ ಇತ್ತು. ಆದ್ರೆ, ತಮ್ಮಿಬ್ಬರ ಲವ್ವಿಡವ್ವಿಗೆ ಪತಿ ಅರುಣ್​ ಕುಮಾರ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ರಂಜಿತಾ ಜೂ.28ರಂದು ಪ್ರಿಯಕರ ಜತೆ ಸೇರಿ ಪತಿ ಅರುಣ್​ನನ್ನು ಕೊಲೆ ಮಾಡಿಸಿದ್ದಳು ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೂ.28ರಂದು ಅರುಣ್ ಕುಮಾರ್ ಕೊಲೆಯಾಗಿತ್ತು. ಈ ಬಗ್ಗೆ ಬೆಂಗಳೂರಿನ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಕೊಲೆಯಾದ ವ್ಯಕ್ತಿಯ ಪತ್ನಿ ಮೇಲೆ ಅನುಮಾನ ಬಂದಿದ್ದು, ಕೂಡಲೇ ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಟಾಬಯಲಾಗಿದೆ.

Loading

Leave a Reply

Your email address will not be published. Required fields are marked *