ಸಿಎಂ ಆಗಿದ್ದಾಗಿನ ಕನಸು ನನಸಾಗಿರುವುದು ಬಹಳ ಸಂತೋಷ ತಂದಿದೆ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು : ಶಿವಮೊಗ್ಗದ ಜನತೆಗೆ ಇಂದು ಸಂಭ್ರಮದ ದಿನ. ಇಂದಿನಿಂದ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನಯಾನ ಆರಂಭವಾಗಿದೆ. ಇದಕ್ಕೆ ಕಾರಣಕರ್ತರಾದವರು ಆ ಭಾಗದ ರೈತರು. ಶಿವಮೊಗ್ಗ ಏರ್ಪೋರ್ಟ್ ನಿರ್ಮಾಣಕ್ಕೆ ಕೃಷಿ ಜಮೀನುಗಳ ಸ್ವಾಧೀನದಿಂದ ಹಿಡಿದು ಯಾವುದೇ ಅಡ್ಡಿ ಆತಂಕವಿಲ್ಲದೆ, ತಕರಾರು ಇಲ್ಲದೆ ಸುಗಮವಾಗಿ ನಡೆದಿದೆ. ಹಾಗಾಗಿ ಎಲ್ಲಾ ಗೌರವ ಆ ಭಾಗದ ರೈತರಿಗೆ ಸಲ್ಲಬೇಕು. ಬೆಂಗಳೂರು ನಂತರ ದೊಡ್ಡ ವಿಮಾನ ನಿಲ್ಥಾಣ ಶಿವಮೊಗ್ಗದಲ್ಲಿ ಆಗಿದೆ. ಸಹಕಾರ ಕೊಟ್ಟ ರೈತರಿಗೆ  ಧನ್ಯವಾದ ತಿಳಿಸುತ್ತೇನೆ, ಅಭಿನಂದನೆ ತಿಳಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *