ಲಿವಿಂಗ್ ಇನ್ ಟುಗೆದರ್ʼ​ನಲ್ಲಿದ್ದ ಪ್ರೇಮಿಗಳು ಆತ್ಮಹತ್ಯೆ

ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ಲಿವಿಂಗ್ ಇನ್ ಟುಗೆದರ್​ನಲ್ಲಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ ಘಟನೆ ನಡೆದಿದ್ದು, ಮೃತರನ್ನು ಸೌಮಿನಿ ದಾಸ್ (20) ಹಾಗೂ ಕೇರಳದ ಅಭಿಲ್ ಅಬ್ರಹಾಂ (29) ಎಂದು ಗುರುತಿಸಲಾಗಿದೆ. ಇಬ್ಬರೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಸೌಮಿನಿ ದಾಸ್​ಗೆ ಮದುವೆಯಾಗಿದ್ದು, ಗಂಡನಿಂದ ದೂರವಾಗಿದ್ದರು. ಈ ವೇಳೆ, ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಆಕೆಗೆ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂನ ಪರಿಚಯವಾಗಿದೆ. ಅನಂತರ ಇಬ್ಬರು ಒಟ್ಟಿಗೆ ಜೀವನ ನಡೆಸಲು ತೀರ್ಮಾನಿಸಿ, ದೊಡ್ಡಗುಬ್ಬಿಯ ಫ್ಲಾಟ್​​ನಲ್ಲಿ ವಾಸವಾಗಿದ್ದರು..

ಭಾನುವಾರ ಸೌಮಿನಿ ದಾಸ್​​ಗೆ ತನ್ನ ಗಂಡನಿಂದ ಫೋನ್ ಬಂದಿದೆ. ಪೋನ್​ನಲ್ಲೇ ಸೌಮಿನಿ ಹಾಗೂ ಗಂಡನ ನಡುವೆ ಜಗಳ ಆಗಿದ್ದು, ಕಿರುಚಾಟ, ಕೂಗಾಟ ನಡೆಸಿದ್ದಾರೆ. ಇದರಿಂದ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದು, ಇಬ್ಬರೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಸೌಮಿರಾ ದಾಸ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ತೀವ್ರ ಗಾಯಗೊಂಡ ಅಭಿಲ್ ಅಬ್ರಾಹಂ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಹ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *